Nokia Logo : 60 ವರ್ಷಗಳ ನಂತರ ತನ್ನ ಲೋಗೋ ಚೇಂಜ್ ಮಾಡಿದ ನೋಕಿಯಾ ಕಂಪನಿ…
ಒಂದು ಕಾಲದಲ್ಲಿ ಮೊಬೈಲ್ ಮಾರುಕಟ್ಟೆಯನ್ನು ಆಳುತ್ತಿದ್ದ ನೋಕಿಯಾ ಕಂಪನಿ ಕಾಲದ ಹೊಡೆತಕ್ಕಿ ಸಿಲುಕಿ ಕುಸಿದು ಬಿದ್ದಿತ್ತು. ತಂತ್ರಜ್ಞಾನದಲ್ಲಿ ಅಪ್ಡೇಟ್ ಆಗದೇ ಇದ್ದದ್ದು ಮತ್ತು ಹೊಸ ಸ್ಮಾರ್ಟ್ ಫೋನ್ ಕಂಪನಿಗಳ ಹೊಡೆತಕ್ಕೆ ಸಿಲುಕಿ ನೆಲಕಚ್ಚಿತ್ತು. ಇದೀಗ ನೋಕಿಯಾ ಮತ್ತೆ ಮಾರುಕಟ್ಟೆಗೆ ಕಾಲಿಟಿದ್ದು ಸಂಪೂರ್ಣವಾಗಿ ಬದಲಾಗಿ ಸ್ಮಾರ್ಟ್ ಪೋನ್ ಲೋಕದಲ್ಲಿ ಕ್ರಾಂತಿ ಮಾಡಲು ಮುಂದಾಗಿದೆ ಇದರ ಭಾಗವಾಗಿ ನೋಕಿಯಾ 60 ವರ್ಷಗಳ ನಂತರ ತನ್ನ ಲೋಗೋವನ್ನ ಬದಲಾವಣೆ ಮಾಡಿದೆ.
ಆರು ದಶಕಗಳ ಕಾಲ ಒಂದೇ ಲೋಗೋವನ್ನು ಉಳಿಸಿಕೊಂಡು ಬಂದಿದ್ದ ನೋಕಿಯಾ ಇದೀಗ ಹೊಸ ಕಾರ್ಯತಂತ್ರದ ಸೂಚನೆ ನೀಡಿದೆ. ಹೊಸ ಲೋಗೋದಲ್ಲಿ ‘ನೋಕಿಯಾ’ಪದದ ಐದು ಅಕ್ಷರಗಳು ಐದು ವಿಭಿನ್ನ ಶೈಲಿಯಲ್ಲಿವೆ. ಈ ಹಿಂದೆ ನೀಲಿ ಬಣ್ಣದಲ್ಲಿದ್ದ ನೋಕಿಯಾ ಅಕ್ಷರಗಳಿಗೆ ಇದೀಗ ಹೊಸ ರೂಪ ನೀಡಲಾಗಿದ್ದು ವಿನೂತನ ಡಿಸೈನ್‌ನ 5 ಫಾಂಟ್‌ನಲ್ಲಿ ಬಣ್ಣ ಬಣ್ಣದಲ್ಲಿ ನೋಕಿಯಾ ಪದದ ಅಕ್ಷರಗಳು ಲೋಗೋದಲ್ಲಿ ಕಂಗೊಳಿಸುತ್ತಿವೆ.
ಫೆಬ್ರವರಿ 27 ರಂದು ಅಂದರೇ ಇಂದಿನಿಂದ ಗುರವಾರದವರೆಗೆ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (ಎಂಡ್ಬ್ಲ್ಯುಸಿ) ನಡೆಯಲಿದೆ. ಇದು ಆರಂಭಕ್ಕೂ ಮುನ್ನ ನೋಕಿಯಾ ತನ್ನ ಬ್ರ್ಯಾಂಡ್ನಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿರುವುದು ಕುತೂಹಲ ಕೆರಳಿಸಿದೆ.
Nokia Logo: After 60 years, Nokia company changed its logo…