ಉತ್ತರ ಕೊರಿಯಾ ಪರಿಸ್ಥಿತಿ ತೀರಾ ಹದಗೆಟ್ಟು ಹೋಗಿದ್ಯಂತೆ..! 

1 min read

ಉತ್ತರ ಕೊರಿಯಾ ಪರಿಸ್ಥಿತಿ ತೀರಾ ಹದಗೆಟ್ಟು ಹೋಗಿದ್ಯಂತೆ..!

ಉತ್ತರ ಕೊರಿಯಾ : ಹುಚ್ಚು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಳ್ವಿಕೆಯ ಉತ್ತರ ಕೊರಿಯಾ  ಹಿಂದೆಂದೂ ಕಾಣದ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆಯಂತೆ.. ಹೀಗೆಂದು ಖುದ್ದು ಕಿಮ್ ಜಾಂಗ್ ಉನ್ ಹೇಳಿಕೊಂಡಿರುವುದಾಗಿ ಅಲ್ಲಿನ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ವಾರ ಪೊನ್ ​ಯಾಂಗ್ ​ನಲ್ಲಿ ನಡೆದ ಪಕ್ಷದ ಪ್ರಾಥಮಿಕ ಸದಸ್ಯರ ಸಮಾವೇಶದಲ್ಲಿ ಕಿಮ್ ಜಾಂಗ್ ಉನ್ ಈ ಮಾತನ್ನು ಹೇಳಿದ್ದು,  ಕರೊನಾವೈರಸ್ ಲಾಕ್​ಡೌನ್​ ಪರಿಣಾಮವಾಗಿ, ಡೊನಾಲ್ಡ್​ ಟ್ರಂಪ್ ನ್ಯೂಕ್ಲಿಯರ್ ಚಟುವಟಿಕೆ ವಿರೋಧಿಸಿ ತಮ್ಮ ಮೇಲೆ ಹೇರಿದ್ದ ಆರ್ಥಿಕ ದಿಗ್ಭಂಧನದಿಂದ ದೇಶ ಇಂದು ಕೆಟಉತ್ತರ ಕೊರಿಯಾ ಪರಿಸ್ಥಿತಿ ತೀರಾ ಹದಗೆಟ್ಟು ಹೋಗಿದ್ಯಂತೆ..!್ಟ ಪರಿಸ್ಥಿತಿ ಎದುರಿಸುತ್ತಿದೆ ಎಂದಿದ್ದಾರೆ. ಈ ಬಗ್ಗೆ ಅಲ್ಲಿನ ಮಾಧ್ಯಮಗಳೇ ವರದಿ ಮಾಡಿವೆ.

ಇನ್ನೂ ಜನರ ಜನರ ಜೀವನ ಗುಣಮಟ್ಟವನ್ನು ಸುಧಾರಿಸುವುದು  ಸವಾಲಾಗಿದೆ. ಹಲವಾರು ಸವಾಲುಗಳನ್ನು ನಾವು ಜಯಿಸಬೇಕಾದ ಕೆಟ್ಟ ಪರಿಸ್ಥಿತಿ ಬಂದೊದಗಿದೆ ಎಂದಿದ್ದಾರೆ.

ಅಂದ್ಹಾಗೆ ಕೆಲ ತಿಂಗಳುಗಳ ಹಿಂದೆಯೂ ಕಿಮ್ ಜಾಂಗ್ ಉನ್ ಅಸಹಾಯಕತೆಯನ್ನ ತೋಡಿಕೊಂಡಿದ್ದರು. ರಾಜಕೀಯ ಸಮ್ಮೇಳನದಲ್ಲಿ ಕಿಮ್ ಆರ್ಥಿಕತೆಯನ್ನು ಸುಧಾರಿಸುವ ತನ್ನ ಯೋಜನೆಗಳು ಯಶಸ್ವಿಯಾಗುತ್ತಿಲ್ಲ ಎಂದು ಒಪ್ಪಿಕೊಳ್ಳುವ ಮೂಲಕ ಅಸಾಮಾನ್ಯ ಮನೋಭಾವವನ್ನು ತೋರಿಸಿಕೊಂಡಿದ್ದರು.

ಒಟ್ಟಾರೆ ಸದಾ ಜನರ ಹಿತದ ಬಗ್ಗೆ ಯೋಚನೆ ಮಾಡುವ ಬದಲು ಬೇರೆ ರಾಷ್ಟ್ರಗಳ ವಿರುದ್ಧ ಕತ್ತಿ ಮಸೆಯುತ್ತ ನ್ಯೂಕ್ಲಿಯರ್ ಬಾಂಬ್ ಗಳ ಪರಿಶೀಲನೆಯಲ್ಲೇ ಸಮಯ ಕಳೆಯುವ ಕಿಮ್ ಇದೀಗ ತನ್ನ ದೇಶದ ಕೆಟ್ಟ ಪರಿಸ್ಥಿತಿಯನ್ನ ಹೇಳಿಕೊಂಡಿದ್ದಾರೆ.

ಏಷ್ಯಾದ ಅತಿ ಶ್ರೀಮಂತ ಮುಖೇಶ್ ಅಂಬಾನಿ… ಜಗತ್ತಿನಲ್ಲಿ ಎಷ್ಟನೇ ಸ್ಥಾನ..?

ಲಾಕ್ ಡೌನ್ ತಂದರೂ ರೈತ ಪ್ರತಿಭಟನೆ ನಿಲ್ಲಲ್ಲ : ರಾಕೇಶ್ ಟಿಕಾಯತ್

ಹೋಳಿ ಗುಂಗಲ್ಲಿ ಕುಡಿದು ನಾಗಿನ್ ಸ್ಟೆಪ್ ಹಾಕಿದ ಕುಡುಕರು – VIDEO VIRAL

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd