NZ v IND ODI Series: ನ್ಯೂಜಿ಼ಲೆಂಡ್ ನೆಲದಲ್ಲಿ ಟೀಂ ಇಂಡಿಯಾಕ್ಕೆ ಸಿಕ್ಕಿಲ್ಲ ನಿರೀಕ್ಷಿತ ಸಕ್ಸಸ್..!!
ನ್ಯೂಜಿ಼ಲೆಂಡ್ ವಿರುದ್ಧದ T20 ಸರಣಿ ವಶಪಡಿಸಿಕೊಂಡಿರುವ ಭಾರತ ಇದೀಗ ಏಕದಿನ ಸರಣಿಯತ್ತ ಕಣ್ಣಿಟ್ಟಿದೆ. ಮೂರು ಪಂದ್ಯಗಳ ODI ಸರಣಿಯ ಮೊದಲ ಪಂದ್ಯ ನ.25ರಂರು ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ.
ಆದರೆ ಕಿವೀಸ್ ನೆಲದಲ್ಲಿ ಟೀಂ ಇಂಡಿಯಾದ ಏಕದಿನ ಕ್ರಿಕೆಟ್ ಸಾಧನೆ ಅಷ್ಟೇನು ಉತ್ತಮವಾಗಿಲ್ಲ. ಭಾರತ ತಂಡ ಈವರೆಗೂ ನ್ಯೂಜಿ಼ಲೆಂಡ್ ನೆಲದಲ್ಲಿ 42 ಏಕದಿನ ಪಂದ್ಯಗಳನ್ನ ಆಡಿದೆ. ಇದರಲ್ಲಿ ಕೇವಲ 14 ಪಂದ್ಯಗಳಲ್ಲಿ ಗೆಲುವು ಕಂಡಿದ್ದು, 25 ಪಂದ್ಯಗಳಲ್ಲಿ ಸೋಲನುಭವಿಸಿದೆ. ಅಲ್ಲದೇ ಬ್ಲ್ಯಾಕ್ ಕ್ಯಾಪ್ಸ್ ವಿರುದ್ಧ ಆಡಿರುವ ಕಳೆದ 4 ODI ಪಂದ್ಯಗಳಲ್ಲಿ ಸಹ ಟೀಂ ಇಂಡಿಯಾ ಸೋಲಿನ ಆಘಾತ ಕಂಡಿದೆ.
ಭಾರತ ತಂಡ 2019ರಲ್ಲಿ ಕೊನೆಯ ಬಾರಿ ನ್ಯೂಜಿ಼ಲೆಂಡ್ ಅಂಗಳದಲ್ಲಿ ಏಕದಿನ ಪಂದ್ಯ ಗೆದ್ದಿತ್ತು. ಇದೀಗ ಮೂರು ವರ್ಷಗಳ ನಂತರ ಮತ್ತೆ ODI ಕ್ರಿಕೆಟ್‌ನಲ್ಲಿ ಕಿವೀಸ್ ಸವಾಲು ಎದುರಿಸಲು ಟೀಂ ಇಂಡಿಯಾ ಸಜ್ಜಾಗಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಆಕ್ಲೆಂಡ್‌ನ ಈಡನ್ ಪಾರ್ಕ್ ಅಂಗಳದಲ್ಲಿ ನಡೆಯಲಿದ್ದು, ಶಿಖರ್ ಧವನ್ ಸಾರಥ್ಯದಲ್ಲಿ ಭಾರತ ತಂಡ ನ್ಯೂಜಿ಼ಲೆಂಡ್ ಸವಾಲು ಎದುರಿಸಲಿದೆ.
ಕಿವೀಸ್ ಅಂಗಳದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಸಾಧನೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಮತ್ತೊಂದೆಡೆ ತಂಡದಲ್ಲಿ ಅನುಭವಿ ಆಟಗಾರರು ಸಹ ಇಲ್ಲದಿರುವುದು ಭಾರತಕ್ಕೆ ಮತ್ತೊಂದು ಚಾಲೆಂಜ್ ಆಗಿದೆ. ಆದರೆ ಯುವ ಹಾಗೂ ಉತ್ಸಾಹಿ ಆಟಗಾರರ ಪಡೆಯನ್ನ