NZ vs SL : ಬ್ಯಾಟಿಂಗ್-ಬೌಲಿಂಗ್‌ನಲ್ಲಿ ಜವಾಬ್ದಾರಿಯ ಆಟ : ಕಿವೀಸ್ ವಿರುದ್ಧ ಲಂಕಾ ಮೇಲುಗೈ
ಬ್ಯಾಟ್ಸ್‌ಮನ್‌ಗಳ ಜವಾಬ್ದಾರಿಯ ಆಟ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ನ್ಯೂಜಿ಼ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಪ್ರವಾಸಿ ಶ್ರೀಲಂಕಾ ಮೇಲುಗೈ ಸಾಧಿಸಿದೆ.
ಕ್ರೈಸ್ಟ್ ಚರ್ಚ್‌ನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನದಾಟದಲ್ಲಿ ಶ್ರೀಲಂಕಾ ಉತ್ತಮ ಪ್ರದರ್ಶನ ನೀಡಿತು.
ಬ್ಯಾಟರ್‌ಗಳ ಜವಾಬ್ದಾರಿಯುತ ಆಟದಿಂದ ಮೊದಲ ಇನ್ನಿಂಗ್ಸ್‌ನಲ್ಲಿ 355 ರನ್‌ಗಳ ಉತ್ತಮ ಮೊತ್ತ ಕಲೆ ಹಾಕಿತು.
ಇದಕ್ಕೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ನ್ಯೂಜಿ಼ಲೆಂಡ್ 2ನೇ ದಿನದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 155 ರನ್‌ಗಳಿಸಿದ್ದು, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಡೆರಿಲ್ ಮಿಚೆಲ್(40) ಹಾಗೂ ಮೈಕಲ್ ಬ್ರೇಸ್ವೆಲ್(9) ರನ್‌ಗಳಿಸಿದ್ದಾರೆ.
ನ್ಯೂಜಿ಼ಲೆಂಡ್ ಪರ ಇನ್ನಿಂಗ್ಸ್ ಆರಂಭಿಸಿದ ಟಾಮ್ ಲೇಥಮ್(67) ಹಾಗೂ ಡೆವೊನ್ ಕಾನ್ವೆ(30) ಮೊದಲ ವಿಕೆಟ್‌ಗೆ 67 ರನ್‌ಗಳ ಉತ್ತಮ ಆರಂಭ ನೀಡಿದರು.
ಆದರೆ ನಂತರದಲ್ಲಿ ಬಂದ ಕೇನ್ ವಿಲಿಯಂಸನ್(1) ಹಾಗೂ ಹೆನ್ರಿ ನಿಕೋಲ್ಸ್(2) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಬಂದ ಮೈಕಲ್ ಬ್ರೇಸ್ವೆಲ್(9) ಸಹ ತಂಡಕ್ಕೆ ಆಸರೆ ಆಗಲಿಲ್ಲ. ಆದರೆ ಜವಾಬ್ದಾರಿಯ ಆಟವಾಡಿದ ಡೆರಿಲ್ ಮಿಚೆಲ್(40*) ಉಪಯುಕ್ತ ರನ್‌ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು.
ಪರಿಣಾಮ 2ನೇ ದಿನದಂತ್ಯಕ್ಕೆ ನ್ಯೂಜಿ಼ಲೆಂಡ್ 5 ವಿಕೆಟ್ ನಷ್ಟಕ್ಕೆ 155 ರನ್‌ಗಳಿಸಿದ್ದು, 193 ರನ್‌ಗಳ ಹಿನ್ನಡೆಯೊಂದಿಗೆ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
ಶ್ರೀಲಂಕಾ ಪರ ಲಹಿರು ಕುಮಾರ ಹಾಗೂ ಫೆರ್ನಾಂಡೊ ತಲಾ 2 ವಿಕೆಟ್ ಪಡೆದರೆ, ಕಸುನ್ ರಜಿತ 1 ವಿಕೆಟ್ ಪಡೆದಿದ್ದಾರೆ.
ಇದಕ್ಕೂ ಮುನ್ನ 2ನೇ ದಿನದಾಟ ಆರಂಭಿಸಿದ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 355 ರನ್‌ಗಳಿಸಿ ಆಲೌಟ್ ಆಯಿತು.
ಮೊದಲ ದಿನದ ಅಂತ್ಯಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಧನಂಜಯ ಡಿಸಿಲ್ವಾ(46) ಹಾಗೂ ಕಸುನ್ ರಜಿತ(22) ರನ್‌ಗಳಿಸಿ ಹೊರ ನಡೆದರು.
ನಂತರ ಕೆಳ ಕ್ರಮಾಂಕದಲ್ಲಿ ಬಂದ ಜಯಸೂರ್ಯ(13), ಲಹಿರು ಕುಮಾರ(13) ಹಾಗೂ ಫೆರ್ನಾಂಡೊ(10) ಅಲ್ಪಮೊತ್ತದ ರನ್‌ಗಳಿಸಿ ಹೊರ ನಡೆದರು.
ಕಿವೀಸ್ ಪರ ನಾಯಕ ಟಿಮ್ ಸೌಥಿ 5 ವಿಕೆಟ್ ಪಡೆದು ಮಿಂಚಿದರೆ, ಮ್ಯಾಟ್ ಹೆನ್ರಿ 4 ಹಾಗೂ ಬ್ರೇಸ್ವೆಲ್ 1 ವಿಕೆಟ್ ಪಡೆದರು.
NZ vs SL : Responsible game in batting-bowling : Lanka dominates against Kiwis