ಓಂ ಶಕ್ತಿ ಯಾತ್ರೆ ಮುಗಿಸಿ ಬಂದವರಲ್ಲಿಯೇ ಹೆಚ್ಚಾಗಿ ಕೊರೊನಾ ಪತ್ತೆ
1 min read
ಓಂ ಶಕ್ತಿ ಯಾತ್ರೆ ಮುಗಿಸಿ ಬಂದವರಲ್ಲಿಯೇ ಹೆಚ್ಚಾಗಿ ಕೊರೊನಾ ಪತ್ತೆ
ಬೆಂಗಳೂರು : ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ಸೋಂಕು ರಣಕೇಕೆ ಹಾಕಲು ಶುರುಮಾಡಿದೆ. ಪ್ರತಿ ದಿನ ರಾಜ್ಯದಲ್ಲಿ ಕೊರೊನಾ ಸ್ಫೋಟವಾಗುತ್ತಿದ್ದು, ಇಂದು ಎಂಟು ಸಾವಿರದ ಗಡಿದಾಟಿದೆ.
ಈ ಮಧ್ಯೆ ಮಂಡ್ಯದಲ್ಲಿ ಇವತ್ತು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಇದೇ ಮೊದಲ ಬಾರಿಗೆ ನೂರರ ಗಡಿ ದಾಟಿದೆ.
ಇದರಲ್ಲಿ ಓಂ ಶಕ್ತಿ ಯಾತ್ರೆಗೆ ಹೋಗಿ ಬಂದವರಲ್ಲಿಯೇ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಹೀಗಾಗಿ ಜಿಲ್ಲಾಡಳಿತಕ್ಕೆ ಓಂ ಶಕ್ತಿ ಪ್ರಕರಣಗಳು ತಲೆನೋವಾಗಿ ಪರಿಣಮಿಸಿದೆ. ಮಂಡ್ಯ ಜಿಲೆಯಲ್ಲಿ ಇಂದು ದಿನ 129 ಜನರಿಗೆ ಕೊರೊನಾ ಸೋಂಕು ವಕ್ಕರಿಸಿದೆ.
ಇತ್ತ ರಾಜ್ಯದಲ್ಲಿ ಇಂದು 8449 ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ನಾಲ್ಕು ಮಂದಿ ಹೆಮ್ಮಾರಿಗೆ ಬಲಿಯಾಗಿದ್ದಾರೆ.
ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಪಾಸಿಟಿಸಿವಿಟಿ ದರ ಶೇಕಡಾ 4.15ಕ್ಕೆ ಬಂದು ನಿಂತಿದೆ.
ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಇಂದೂ ಕೂಡ ಸ್ಫೋಟಗೋಂಡಿದೆ.
ಇವತ್ತು ನಗರದಲ್ಲಿ 6812 ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಮೂರು ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.