ಪ್ರಧಾನಿ ಮೋದಿ ಅವರ ಜನ್ಮದಿನದಂದು, ಅವರ ಬಗ್ಗೆಗಿನ  ಕೆಲವು ವಿಷಯಗಳು:

ಪ್ರಧಾನಿ ಮೋದಿ ಅವರ ಜನ್ಮದಿನದಂದು, ಅವರ ಬಗ್ಗೆಗಿನ  ಕೆಲವು ವಿಷಯಗಳು:

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು 70 ವರ್ಷದ ಸಂಭ್ರಮ. ಈ ಸಂದರ್ಭದಲ್ಲಿ ಅವರ ಬಗ್ಗೆಗಿನ ಕೆಲವು ವಿಷಯಗಳು :

ಮೋದಿ ಜನಿಸಿದ್ದು ಗುಜರಾತ್‌ನ ವಾಡ್‌ನಗರದಲ್ಲಿ.
ರೈಲ್ವೆ ನಿಲ್ದಾಣಗಳಲ್ಲಿ ಚಹಾ ಮಾರಾಟ ಮಾಡಲು ಅವರು ತಮ್ಮ ತಂದೆಗೆ ಸಹಾಯ ಮಾಡುತ್ತಿದ್ದರು.
ಮೋದಿಯವರು ತಮ್ಮ ಎಂಟನೇ ವಯಸ್ಸಿನಲ್ಲಿ ಆರ್‌ಎಸ್‌ಎಸ್ ಬಗ್ಗೆ ತಿಳಿದುಕೊಂಡರು ಮತ್ತು ತರಬೇತಿ ಅವಧಿಗಳು, ಉಪನ್ಯಾಸಗಳಿಗೆ ಹಾಜರಾಗಲು ಪ್ರಾರಂಭಿಸಿದರು.
ಆರ್‌ಎಸ್‌ಎಸ್‌ನ ಜೂನಿಯರ್ ಕೆಡೆಟ್‌ಗೆ ಸೇರ್ಪಡೆಗೊಂಡ ನಂತರ ಲಕ್ಷ್ಮಣರಾವ್ ಇನಾಮ್ದಾರ್ ಅವರ ಮಾರ್ಗದರ್ಶಕರಾದರು.
ಮೋದಿ 1982 ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು.
ಸ್ವತಂತ್ರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನಿ ಇವರು.
ಮೋದಿಯವರು ಗುಜರಾತಿ ಭಾಷೆಯಲ್ಲಿ 1975 ರ ತುರ್ತು ಪರಿಸ್ಥಿತಿಯ ಸಮಯದ ಅನುಕ್ರಮ ಘಟನೆಗಳ ಪುಸ್ತಕ ಬರೆದಿದ್ದಾರೆ.
1971 ರ ಯುದ್ಧದ ನಂತರ, ಅವರು ಆರ್‌ಎಸ್‌ಎಸ್‌ನ ಪೂರ್ಣ ಸಮಯದ ಪ್ರಚಾರಕರಾದರು ಮತ್ತು 1985 ರಲ್ಲಿ ಬಿಜೆಪಿಗೆ ಸೇರಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿ ವಿವೇಕಾನಂದರ ಅನುಯಾಯಿಗಳು.
ಮೋದಿ ಸುಮಾರು ಐದು ಗಂಟೆಗಳ ಕಾಲ ಮಾತ್ರ ನಿದ್ದೆ ಮಾಡುತ್ತಾರೆ. ಬೆಳಿಗ್ಗೆ 5-5.30 ರ ನಡುವೆ ಎಚ್ಚರಗೊಳ್ಳುತ್ತಾರೆ.
ಅವರು ಸಸ್ಯಾಹಾರಿ ಆಹಾರವನ್ನು ಸೇವಿಸುತ್ತಾರೆ ಮತ್ತು ಪ್ರತಿದಿನ ಯೋಗವನ್ನು ಅಭ್ಯಾಸ ಮಾಡುತ್ತಾರೆ.
2014 ರ ಫೋರ್ಬ್ಸ್ ನಿಯತಕಾಲಿಕೆಯ ಅತ್ಯಂತ ಪ್ರಭಾವ ಶಾಲಿ‌  ವ್ಯಕ್ತಿಗಳ ಪಟ್ಟಿಯಲ್ಲಿ ಮೋದಿ 15 ನೇ ಸ್ಥಾನದಲ್ಲಿದ್ದಾರೆ.
ಅದೇ ವರ್ಷದಲ್ಲಿ, ಟೈಮ್ ನಿಯತಕಾಲಿಕೆಯು ಅವರನ್ನು ವರ್ಷದ ವ್ಯಕ್ತಿ ಎಂದು ಹೆಸರಿಸಿತು. ಟೈಮ್ ನಿಯತಕಾಲಿಕೆಯ 2014, 2015 ಮತ್ತು 2017 ರಲ್ಲಿ ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಪ್ರಧಾನಿ ಮೋದಿ ಅವರ ಹೆಸರಿದೆ.
ಅಮೆರಿಕದ ಮಾಜಿ ಅಧ್ಯಕ್ಷರ ನಂತರ, ಪ್ರಧಾನಿ ಮೋದಿ ಟ್ವಿಟ್ಟರ್ ನಲ್ಲಿ ಹೆಚ್ಚು ಬೆಂಬಲಿಗರನ್ನು ಹೊಂದಿದ್ದಾರೆ.

ಆತ್ಮ ನಿರ್ಭರದ ಹರಿಕಾರ ಪ್ರಧಾನಿ ಮೋದಿ ಅವರಿಗೆ 70ನೇ ಹುಟ್ಟುಹಬ್ಬದ ಸಂಭ್ರಮ

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This