ಜಗತ್ತಿನಲ್ಲೇ ಎಲ್ಲೂ ಇರದಂತಹ ಯೂಸ್ ಲೆಸ್ ಕೆಲಸಗಳು ಉತ್ತರಕೊರಿಯಾದಲ್ಲಿದೆ..!
ಉತ್ತರ ಕೊರಿಯಾ…. ಹೆಸರು ಕೇಳ್ತಿದ್ದ ಹಾಗೆ ಎಲ್ಲರ ಕಣ್ನೆದುರಿಗೆ ಬರುವ ಮುಖ ಅಲ್ಲಿನ ಹುಚ್ಚು ಸರ್ವಾಧಿಕಾರಿ ಕಿಮ್ ಜಾಂಗ್ ಉನ್… ಈ ವ್ಯಕ್ತಿ ಹುಚ್ಚಾಟ ಯಾರಿಗೆ ಗೊತ್ತಿಲ್ಲ. ಇವನ ದೇಶದಲ್ಲಿ ಸಿಲುಕಿರುವ ಜನರಿಗೆ ಸ್ವಾತಂತ್ರ್ಯ ಏನೆಂದು ಗೊತ್ತಿರೋದಿಲ್ಲ. ಇನ್ನೂ ಇಲ್ಲಿನ ಜನರಿಗೆ ತಾವು ಇಷ್ಟ ಪಡುವ ಕೆಲಸ ಮಾಡುವ ಹಕ್ಕೂ ಇಲ್ಲ. ಇದೂ ಕೂಡ ನಿರ್ಧಾರ ಮಾಡೋದು ಕಿಮ್.
16 ವರ್ಷದ ವಯಸ್ಸಲ್ಲೇ ಜನರು ಕೆಲಸ ಮಾಡ್ಬೇಕಾಗುತ್ತೆ. ಆದ್ರೆ ಅವರಿಗೆ ಇಷ್ಟ ಬಮದ ಕೆಲಸ ಅಲ್ಲ. ಸರ್ಕಾರ ಕೊಡುವ ಕೆಲಸ.. ಹುಡುಗಿಯರ ಕೆಲಸಗಳ ವಿಚಾರ ಬಂದ್ರೆ ಖುದ್ದು ಕಿಮ್ ಸುಂದರ ಯುವತಿಯರನ್ನ ಆ ಕೆಲಸಗಳಿಗೆ ಸೆಲೆಕ್ಟ್ ಮಾಡುತ್ತಾರೆ.. ಈ ದೆಶದಲ್ಲಿ ಬಿಟ್ರೆ ವಿಚಿತ್ರ ಕೆಲಗಳು , ಕೆಟ್ಟ ಹಾಗೂ ದರಿದ್ರ ಜಾಬ್ ಗಳು ನಿಮಗೆ ಬಹುಷಃ ಜಗತ್ತಿನ ಬೇರ್ಯಾಯ ದೇಶಗಳಲ್ಲೂ ಸಿಗುವುದಿಲ್ಲ
ಉತ್ತರ ಕೊರಿಯಾದಲ್ಲಿ ಮಾತ್ರ ಇರುವ ಯೂಸ್ ಲೆಸ್ ಜಾಬ್ಸ್ / ವಿಚಿತ್ರ ಕೆಲಸಗಳು
1. ಸ್ಟೋನ್ ಲೇಡಿ – ಕಲ್ಲನ್ನ ಪಾಲೀಸ್ ಮಾಡುವ ಕೆಲಸ. ಅದು ಈ ಕೆಲಸ ಮಹಿಳೆಯರದ್ದು.
2. ಟ್ರಾಫಿಕ್ ಲೇಡಿ – ಟ್ರಾಫಿಕ್ ಲೇಡಿ – ಈ ಹುದ್ದೆಗೆ ಸುಂದರ ಯುವತಿಯರು ಮಾತ್ರವೇ ಅರ್ಹರು. ಖುದ್ದು ಕಿಮ್ ಜಾಂಗ್ ಉನ್ ಈ ಹುದ್ದೆಗೆ ಅಬ್ಯರ್ಥಿಗಳನ್ನ ಆಯ್ಕೆ ಮಾಡುತ್ತಾರಂತೆ. ಹೀಗಾಗಿ ಇದು ತುಂಬಾನೆ ಗೌರವಾನ್ವಿತ ಹುದ್ದೆ. ಇವರ ಮತ್ತೊಂದು ಹೆಸರು ಐಕಾನಿಕ್ ಫ್ಯಾಶನ್ ಲೇಡೀಸ್ – ಕೆಲಸದ ಜೊತೆಗೆ ಫ್ಯಾಶನೇಬಲ್ ಆಗಿರುವುದು ಬಹಳ ಮಯುಖ್ಯವಾಗಿರುತ್ತೆ. ಈ ಹುದ್ದೆ ಮಾಡಲು ಬಯಸುವ ಆಕಾಂಕ್ಷಿಗಳು ಸುಂದರವಾಗಿರುವ ಜೊತೆ ಜೊತೆಗೆ ಅವಿವಾಹಿತರಾಗಿರಬೇಕು. 24 ವರ್ಷಕ್ಕೆ ಈ ಹುದ್ದೆಯಿಂದ ನಿವೃತ್ತಿ ಹೊಂದುತ್ತಾರೆ. ಹೌದು ಕೇವಲ 16 ವರ್ಷದಿಂದ 24 ವರ್ಷದ ವಯಸ್ಸಿನವರೆಗೂ ಮಾತ್ರವೇ ಈ ಹುದ್ದೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ನೀಡಲಾಗಿದೆ. ಬಹುಶಃ ಗಗನಯಾತ್ರಿಗಳಿಗೂ ಇಷ್ಟು ಕಟ್ಟು ನಿಟ್ಟಿನ ಕ್ರಮಗಳು ಇರೋದಿಲ್ಲ.
3. ಅಕ್ಕಿ ಪರಿಶೀಲನೆ – ಒಂದೊಂದು ಅಕ್ಕಿಕಾಳನ್ನೂ ಕೂಡ ಪರಿಸೀಲಿಸಿ ನಂತರವೇ ಅದರಿಂದ ಅಡಿಗೆ ಮಾಡಿ ಕಿಮ್ ಮನೆತನದವರಿಗೆ ಊಟ ಬಡಿಸುವ ಕೆಲಸ
5. ಕಿಮ್ ಜಾಂಗ್ ಉನ್ ಕೆಲ ಸುಂದರ , ಆಕರ್ಷಕ ಮಹಿಳೆಯರ ಗುಂಪನ್ನ ಮನರಂಜನೆಗಾಗಿ ಆಯ್ಕೆ ಮಾಡುತ್ತಿದ್ದರು. ಅವರ ಕೆಸಲ ಕಿಮ್ ಮನೆತನ ಯಾವಾಗ ಎಷ್ಟು ಹೊತ್ತಿನಲ್ಲೇ ಕರೆದರೂ ಬಂದು ನೃತ್ಯ ಮಾಡಬೇಕು, ಹಾಡಬೇಕಯು ಮನರಂಜಿಸುವುದು. ಇವರನ್ನೂ ಕೂಡ ಕಿಮ್ ಮನೆತನದವರು ಖುದ್ದು ಆಯ್ಕೆ ಮಾಡುತ್ತಿದ್ದರು. ಆದ್ರೆ ಕಿಮ್ ಜಾಂಗ್ ಉನ್ ಸಾವಿನ ನಂತರ ಈ ನೌಕರಿಯನ್ನ ರದ್ದು ಮಾಡಲಾಗಿದೆ. ಆದ್ರೆ ಷರತ್ತನ್ನೂ ವಿಧಿಸಲಾಗಿತ್ತು. ಈ ಕೆಲಸದ ಸೀಕ್ರೆಟ್ ಸೀಕ್ರೆಟ್ ಆಗಿಯೇ ಉಳಿದಿರಬೇಕೆಂಬ ಶರತ್ತು ವಿಧಿಸಿ ಈ ಕೆಲಸವನ್ನ ಕಿಮ್ ರದ್ದುಗೊಳಿಸಿದ್ದರು ಎನ್ನಲಾಗಿದೆ. ಆದ್ರೆ ಕಿಮ್ ತಂದೆ ನೇಮಕ ಮಾಡಿದ್ದ ಯುವತಿಯರ ತಂಡವನ್ನ ಕೆಲಸದಿಂದ ರಿಲೀಸ್ ಮಾಡಿದ ಬಳಿಕ ಕಿಮ್ ಜಾಂಗ್ ಉನ್ ತನಗಾಗಿ ವಯಕ್ತಿಕವಾಗಿ ಹೊಸದಾಗಿ ಯುವತಿಯರನ್ನ ಆಯ್ಕೆ ಮಾಡಿ ವಯಕ್ತಿಕ ಮನರಂಜನೆಗಾಗಿ ನೇಮಕ ಮಾಡಿಕೊಂಡಿದ್ದಾರಂತೆ..
6. ಶಿಲ್ಪಕಾರರು ಈ ದೇಶದಲ್ಲಿ ಕೇವಲ ಮೂವರ ಪ್ರತಿಮೆಗಳನ್ನ ಕೆತ್ತಬಹುದು. ಒಂದು ಕಿಮ್ ಜಾಂಗ್ ಉನ್ , ಅವರ ತಂದೆ ಕಿಮ್ ಜಾಂಗ್ ಇಲ್ , ತಾತ ಕಿಮ್ ಇಲ್ ಸಂಗ್. – ಈ ದೇಶದಲ್ಲಿ ಒಟ್ಟು 34 ಸಾವಿರ ಮೂರ್ತಿಗಳಿವೆ. ಆದ್ರೆ ಕೇವಲ ಈ ಕಿಮ್ ಮನೆತನದವರದ್ದು.
7. ಫ್ಯಾಶನ್ ಪೊಲೀಸ್ – ಇವರ ಕೆಲಸ ಸಾರ್ವಜನಿಕ ಸ್ಥಳಗಳಲ್ಲಿ ಜನರ ಡ್ರೆಸ್ಸಿಂಗ್ ಸೆನ್ಸ್ , ಅವರ ಫ್ಯಾಶನ್ , ಸ್ಟೈಲ್ ಗಮನಿಸಿ ಕಾನೂನು ಬಾಹಿರವಾಗಿದ್ದರೆ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸುವುದು. ಹೇರ್ ಸ್ಟೈಲ್ , ಬಟ್ಟೆ ಎಲ್ಲಾ ಅಂಶಗಳನ್ನ ಗಮನಸಿಸುತ್ತಿರುತ್ತಾರೆ. ಮತ್ತೊಂದು ವಿಚಾರ ಅಂದ್ರೆ ಇಲ್ಲಿನ ಜನರು ಪಾಶ್ಚಾತ್ಯ ಶೈಲಿಯಲ್ಲಿ ಬಟ್ಟೆ ಧರಿಸಿದ್ದು ಕಂಡು ಬಂದರೆ ಅವರಿಗೆ ಕಾನೂನಿನ ಅಡಿ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಅಷ್ಟೇ ಅಲ್ಲ ಈ ನಿಯಮ ಬ್ರೇಕ್ ಮಾಡಿದ್ರೆ ಲೇಬರ್ ಕ್ಯಾಂಪ್ ಗಳಿಗೆ ಕಳುಹಿಸಲಾಗುತ್ತದೆ. ಈ ಕ್ಯಾಂಪ್ ಗಳಲ್ಲಿ ಸಿಲುಕಿದವರಿಗೆ ನರಕ ದರ್ಶನ ಗ್ಯಾರಂಟಿ… ಇಲ್ಲಿ ಮುಖ್ಯವಾಗೀ ಜೀನ್ಸ್ ಬ್ಯಾನ್ ಮಾಡಲಾಗಿದೆ.