ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಫೇಮಸ್ ಆಗಿರುವುದು ಟಿಕ್‌ಟಾಕ್. ಟಿಕ್‌ಟಾಕ್ ನಲ್ಲಿ ಹೊಸ ಪ್ರತಿಭೆಗಳು ಕಾಣಸಿಗುತ್ತವೆ. ಇದರಿಂದಾಗಿ ಸಾಕಷ್ಟು ಮನರಂಜನೆ ಸಿಗುತ್ತದೆ. ಪ್ರತಿಭೆಗಳಿಗೆ ವೇದಿಕೆ ಸಿಗುವುದು ಕಡಿಮೆ. ಆದರೆ ಟಿಕ್ ಟಾಕ್ ಬಂದ ನಂತರದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳು ಹೊರ ಪ್ರಪಂಚಕ್ಕೆ ಪರಿಚಯವಾಗಿವೆ. ಟಿಕ್ ಟಾಕ್ ನಲ್ಲಿ ಇಷ್ಟು ದಿನ ಯಾವದೇ ರೀತಿಯ ತಾರತಮ್ಯ ಇರಲಿಲ್ಲ. ಸೌಂದರ್ಯ, ಅಂಗವೈಕಲ್ಯ ಎಲ್ಲವನ್ನೂ ಮೀರಿ ಇಲ್ಲಿ ಪ್ರತಿಭೆಗಳು ಬೆಳೆಯುತ್ತಿದ್ದವು. ಇದೀಗ ಟಿಕ್‌ಟಾಕ್ ನಲ್ಲಿ ಸೌಂದರ್ಯವAತರಿಗೆ ಮಾತ್ರ ಅವಕಾಶ ಎಂಬ ನಿರ್ದೇಶನವೊಂದು ಬಂದಿದೆ. ಈ ನಿರ್ದೇಶನದ ವಿರುದ್ಧ ಟಿಕ್‌ಟಾಕ್ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಕ್‌ಟಾಕ್‌ನಲ್ಲಿ ಯಾರು ಚೆನ್ನಾಗಿರುವುದಿಲ್ಲವೋ ಅವರ ಅಕೌಂಟ್‌ಗಳನ್ನು ತೆಗೆದುಹಾಕಿ ಎಂದು ಹೇಳಿದೆ. ಟಿಕ್‌ಟಾಕ್‌ನ ಪ್ರಕಾರ ತೆಳ್ಳಗಿರುವವರು, ಬೊಜ್ಜು ಇರುವವರು, ಸುಂದರವಾದ ಮುಖ ಇಲ್ಲದವರು, ಸುಕ್ಕುಗಳಿರುವವರು, ಕಣ್ಣಿನಲ್ಲಿ ತೊಂದರೆ ಇರುವವರು, ಅಂಗವಿಕಲರಿಗೆ ಟಿಕ್ ಟಾಕ್ ನಲ್ಲಿ ಅವಕಾಶವಿಲ್ಲ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ ಟಿಕ್ ಟಾಕ್ ನಲ್ಲಿ ಮಾಡುವ ವಿಡಿಯೋಗಳಿಗೂ ಕೆಲ ನಿರ್ಬಂಧ ಹೇರಲಾಗಿದೆ. ಸ್ವಚ್ಛವಾದ ಸ್ಥಳಗಳಲ್ಲಿ ಮಾತ್ರ ವಿಡಿಯೋಗಳನ್ನು ಚಿತ್ರಿಸುವಂತೆ ಸೂಚಿಸಲಾಗಿದೆ. ಸ್ಲಂಗಳು, ಹಳೆಯ ಮನೆಗಳು ಹಾಗೂ ಕೊಳಕು ಜಾಗಗಳಲ್ಲಿ ಚಿತ್ರಿತವಾಗಿರುವ ವಿಡಿಯೋಗಳನ್ನು ತೆಗೆದುಹಾಕುವಂತೆ ಹೇಳಲಾಗಿದೆ.
ಆದರೆ ಟಿಕ್‌ಟಾಕ್ ಸಂಸ್ಥೆಯ ವಕ್ತಾರರು ಈ ನಿರ್ದೇಶನವನ್ನು ತಾವು ಈಗ ಅನುಸರಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಇಂತದ್ದೊAದು ನಿರ್ದೇಶನ ಮೊದಲು ಇತ್ತು, ಆದರೆ ನಂತರ ಅದನ್ನು ತೆಗೆದುಹಾಕಲಾಯಿತು ಎಂದು ಅವರು ತಿಳಿಸಿದ್ದಾರೆ. ಆದರೆ ಟಿಕ್‌ಟಾಕ್‌ನ ಈ ನಿರ್ದೇಶನದ ಕುರಿತಾಗಿ ಚರ್ಚೆ ನಡೆಯುತ್ತಿದೆ. ಸಂಸ್ಥೆಯ ಈ ನಡೆಗೆ ಸಾಕಷ್ಟು ಜನ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.
ನಮಗೆ ಯುದ್ಧ ಬೇಡ ಶಾಂತಿ ಬೇಕು, ಆದರೆ ಇದು ನಮ್ಮ ಬಲಹೀನತೆಯಲ್ಲ: ಸ್ವಾತಂತ್ರ್ಯ ದಿನದಂದು ಭಾರತಕ್ಕೆ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಎಚ್ಚರಿಕೆ
ಇಸ್ಲಾಮಾಬಾದ್: ನಮಗೆ ಯುದ್ಧ ಬೇಕಾಗಿಲ್ಲ, ನಾವು ಶಾಂತಿಯನ್ನು ಮಾತ್ರ ಬಯಸುತ್ತೇವೆ. ಆದರೆ, ಶಾಂತಿಗಾಗಿ ನಾವು ಕೈಜೋಡಿಸುತ್ತಿರುವುದನ್ನು ಯಾರೂ ನಮ್ಮ ಬಲಹೀನತೆ ಎಂದು ಭಾವಿಸಬಾರದು ಎಂದು ಪಾಕಿಸ್ತಾನದ ಪ್ರಧಾನಿ...








