ಆಕ್ಸಿಜನ್ ಕೊರತೆ : ಕಲಬುರಗಿಯಲ್ಲಿ ನಾಲ್ಕು ಸಾವು

1 min read

ನಿಂತೇ ಹೋಯ್ತು “ಪ್ರಾಣ”ವಾಯು : ಆಕ್ಸಿಜನ್ ಕೊರತೆ ಕಲಬುರಗಿಯಲ್ಲಿ ನಾಲ್ಕು ಸಾವು Oxygen

ಕಲಬುರ್ಗಿ : ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಫಜಲಪುರದ ತಾಲೂಕು ಆಸ್ಪತ್ರೆಯಲ್ಲಿ ಸೋಮವಾರ ತಡರಾತ್ರಿ ಆಮ್ಲಜನಕದ ಕೊರತೆಯಿಂದ ನಾಲ್ವರು ಕೊರೊನಾ ಸೋಂಕಿತರು ಕೊನೆಯುಸಿರೆಳೆದಿದ್ದಾರೆ.

ಮೂಲಗಳ ಪ್ರಕಾರ ಈ ಆಸ್ಪತ್ರೆಯಲ್ಲಿ ಸೋಮವಾರ ಆರು ಸಿಲಿಂಡರ್ ಗಳು ಮಾತ್ರ ಇದ್ದು, ಒಟ್ಟು 30 ರೋಗಿಗಳು ಅಡ್ಮಿಟ್ ಆಗಿದ್ದರು. ಆ ಆರು ಸಿಲಿಂಡರ್ ಗಳನ್ನು ಆರು ಮಂದಿಗೆ ನೀಡಲಾಗಿದೆ.

Oxygen

ಆದರೆ, ಸೋಮವಾರ ತಡರಾತ್ರಿ ಆರೂ ಸಿಲಿಂಡರ್‍ಗಳು ಖಾಲಿ ಆದ ಕಾರಣ ನಾಲ್ವರು ಬೆಡ್‍ಗಳ ಮೇಲೆ ನರಳಾಡಿ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಅಂದಹಾಗೆ ಆಕ್ಸಿಜನ್ ಕೊರತೆಯಿಂದಾಗಿ ಭಾನುವಾರ ಇಲ್ಲಿ ಐವರು ಪ್ರಾಣಬಿಟ್ಟಿದ್ದರು. ಕಳೆದ ಮೂರು ದಿನಗಳಲ್ಲಿ 12 ಮಂದಿ ಆಮ್ಲಜನಕ ಕೊರತೆಯಿಂದಾಗಿಯೇ ಇಲ್ಲಿ ಪ್ರಾಣ ಬಿಟ್ಟಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd