ಕಳಪೆ ಕಾಮಗಾರಿ ಪ್ರಶ್ನಿಸಿದ್ದಕ್ಕೆ ಅರೆಸ್ಟ್ ಮಾಡಿ ಎಂದ ಶಾಸಕರು..
ಶಾಸಕರಿಗೆ ಜನಸಾಮಾನ್ಯರು ಏನನ್ನು ಕೇಳುವಂತಿಲ್ಲ. ಪ್ರತಿಭಟನೆಗೆ ಮುಂದಾದ್ರೆ ಶಾಸಕರೇ ಅರೆಸ್ಟ ಮಾಡಸ್ತಾರೆ.ಇಂತಹದ್ದೊಂದು ಘಟನೆ ನಡೆದಿರುವ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಿಡಕಲ್ ಗ್ರಾಮದಲ್ಲಿ.
ಕಳಪೆ ಕಾಮಗಾರಿ ಆಗಿದೆ ಅಂತ ದೂರಿದ ಯುವಕರನ್ನ ಅರೆಸ್ಟ್ ಮಾಡುವಂತೆ ಕುಡಚಿ ಮೀಸಲು ಕ್ಷೇತ್ರದ ಶಾಸಕ ಪಿ ರಾಜೀವ್ ಪೊಲೀಸರಿಗೆ ಸೂಚನೆ ನೀಡಿದ್ದು, ಯುವಕರನ್ನ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ನಡೆದಿದೆ.
ಬಿಜೆಪಿಯ ಸೇವಾ ಪಾಕ್ಷಿಕ ಅಭಿಯಾನ ಕಾರ್ಯಕ್ರಮದಲ್ಲಿ ಕುಡಚಿ ಮತಕ್ಷೇತ್ರದ ಶಾಸಕ ಪಿ ರಾಜೀವ ಅವರನ್ನ ಕೆಲ ಯುವಕರು ಪ್ರಶ್ನೆ ಮಾಡಿದಾಗ ಈ ಘಟನೆ ನಡೆದಿದೆ.
ಬಸ್ತವಾಡ ಗ್ರಾಮದ ರಸ್ತೆ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಕೆಲವು ಯುವಕರು ಪ್ರತಿಭಟನೆ ನಡೆಸಿದ್ದು ಕೆಲಹೊತ್ತು ಕುಡಚಿ ಶಾಸಕ ಪಿ ರಾಜೀವ ಪ್ರತಿಭಟನೆ ನಿರತ ಯುವಕರೊಂದಿಗೆ ಮಾತಿನ ಚಕಮಕಿ ನಡೆಸಿದ್ದು ನಂತರ ಪೋಲಿಸರಿಗೆ ಇವರನ್ನ ಸೆಕ್ಯೂರ್ ಮಾಡಿ ಎನ್ನುವ ಮೂಲಕ ಮಾತಿನ ದಾಡಿಯನ್ನ ಬದಲಿಸಿದ್ದಾರೆ.
P Rajiv: The MLA said to arrest him for questioning the poor work.








