ಸೌದಿ ಜೊತೆಗಿನ ಬಿಕ್ಕಟ್ಟಿನ ನಡುವೆಯೂ ಕಾಶ್ಮೀರ ವಿಚಾರದಲ್ಲಿ ಚೀನಾದ ಬೆಂಬಲ ಕೋರಿದ ಪಾಕ್
ಹೊಸದಿಲ್ಲಿ, ಅಗಸ್ಟ್ 22: ಸೌದಿ ಅರೇಬಿಯಾದಿಂದ ಮುಖಭಂಗಕ್ಕೆ ಒಳಗಾಗಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಅವರು ಶುಕ್ರವಾರ ತಮ್ಮ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾದರು. ಪಾಕಿಸ್ತಾನ ತನ್ನ ಸಾಂಪ್ರದಾಯಿಕ ಮಿತ್ರ ಸೌದಿ ಅರೇಬಿಯಾ ಜೊತೆ ಬಿರುಕು ಬಿಟ್ಟಿರುವ ಸಂಬಂಧಗಳ ಮಧ್ಯೆ ಕಾಶ್ಮೀರ ಮತ್ತು ಅಫ್ಘಾನಿಸ್ತಾನದ ಇತರ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಸಭೆಯ ನಂತರ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಚೀನಾ ಕಾಶ್ಮೀರ, ಪ್ರಾದೇಶಿಕ ಸಮಗ್ರತೆ ಮತ್ತು ಕೋವಿಡ್ -19 ಲಸಿಕೆ ಅಭಿವೃದ್ಧಿ ಕುರಿತು ಪಾಕಿಸ್ತಾನವನ್ನು ಬೆಂಬಲಿಸಿದೆ.
ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ, ಅದರ ಕಾಳಜಿ, ಸ್ಥಾನ ಮತ್ತು ಪ್ರಸ್ತುತ ತುರ್ತು ವಿಷಯಗಳು ಸೇರಿದಂತೆ ಪಾಕಿಸ್ತಾನದ ಚೀನಾಕ್ಕೆ ವಿವರಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಶ್ಮೀರ ವಿಷಯವು ಭಾರತ ಮತ್ತು ಪಾಕಿಸ್ತಾನದ ನಡುವಿನ ಇತಿಹಾಸದಿಂದ ಉಳಿದಿರುವ ವಿವಾದವಾಗಿದೆ, ಇದು ವಸ್ತುನಿಷ್ಠ ಸಂಗತಿಯಾಗಿದೆ ಮತ್ತು ಯುಎನ್ ಚಾರ್ಟರ್, ಸಂಬಂಧಿತ ಭದ್ರತಾ ಮಂಡಳಿಯ ನಿರ್ಣಯಗಳು ಮತ್ತು ದ್ವಿಪಕ್ಷೀಯ ಒಪ್ಪಂದಗಳ ಮೂಲಕ ವಿವಾದವನ್ನು ಶಾಂತಿಯುತವಾಗಿ ಮತ್ತು ಸರಿಯಾಗಿ ಪರಿಹರಿಸಬೇಕು ಎಂದು ಚೀನಾ ಪುನರುಚ್ಚರಿಸಿದೆ. ಪರಿಸ್ಥಿತಿಯನ್ನು ಸಂಕೀರ್ಣಗೊಳಿಸುವ ಯಾವುದೇ ಏಕಪಕ್ಷೀಯ ಕ್ರಮಗಳನ್ನು ಚೀನಾ ವಿರೋಧಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಪಾಕಿಸ್ತಾನ, ತನ್ನ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡುವಲ್ಲಿ ಇಸ್ಲಾಮಾಬಾದ್‌ನೊಂದಿಗೆ ದೃಢ ವಾಗಿ ನಿಂತಿದ್ದಕ್ಕಾಗಿ ಚೀನಾಕ್ಕೆ ಧನ್ಯವಾದ ಅರ್ಪಿಸಿದೆ.