ಇಸ್ಲಾಮಾಬಾದ್: ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಜಾಲತಾಣ ಟ್ವಿಟರ್ (ಎಕ್ಸ್) ಗೆ ಪಾಕ್ ಸರ್ಕಾರ ನಿಷೇಧ ಹೇರಿದೆ.
ಪಾಕ್ ನ ಆಂತರಿಕ ಸಚಿವಾಲಯವು ದೇಶದ ಸಾರ್ವಭೌಮತ್ವವನ್ನು ಗೌರವಿಸುವಲ್ಲಿ ಎಕ್ಸ್ ವಿಫಲವಾಗಿದೆ. ಮೈಕ್ರೋಬ್ಲಾಗಿಂಗ್ ಸೈಟ್ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿ ಅಲ್ಲಿನ ಸರ್ಕಾರ ನಿಷೇಧ ಹೇರಿದೆ.
ಪಾಕಿಸ್ತಾನದಲ್ಲಿ ಎಕ್ಸ್ ನೋಂದಣಿಯಾಗಿಲ್ಲ ಅಥವಾ ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರುವಂತೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ಸಿಂಧ್ ಹೈಕೋರ್ಟ್ ಗೆ ಪಾರ್ಕ್ ಸರ್ಕಾರ ಹೇಳಿದೆ. ಈ ನಿರ್ಧಾರವು ದೇಶದ ಭದ್ರತೆಯಿಂದ ತೆಗೆದುಕೊಂಡಿದ್ದಾಗಿದೆ. ಈಗಾಗಲೇ ಹಲವು ದೇಶಗಳು ಎಕ್ಸ್ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಿದ್ದರು. ಹೀಗಾಗಿ ನಮ್ಮ ನಿರ್ಧಾರ ಕೂಡ ಸರಿಯಿದೆ ಎಂದು ಪಾಕ್ ಸಮರ್ಥಿಸಿಕೊಂಡಿದೆ. ಆದರೆ, ಪಾಕ್ ಸರ್ಕಾರದ ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಒಂದು ವಾರದೊಳಗೆ ನಿರ್ಬಂಧ ಹಿಂಪಡೆಯಬೇಕೆಂದು ಹೇಳಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.