Pakistani Bride : ದುಬೈನಲ್ಲಿ ಪಾಕಿಸ್ತಾನಿ ವಧುವಿನಷ್ಟೇ ತೂಕದ ಬಂಗಾರ ನೀಡಿದ ತಂದೆ..!! Video Viral
ದುಬೈನಲ್ಲಿ ಪಾಕಿಸ್ತಾನಿ ವಧುವಿನ ತೂಕದಷ್ಟು ಚಿನ್ನವನ್ನ ವರನಿಗೆ ನೀಡಲಾಗಿದ್ದು , ಈ ಸಂಬಂಧಿತ ಫೋಟೋ , ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅಲ್ಲದೇ ಅನೇಕರಿಂದ ಟೀಕೆಗಳು ವ್ಯಕ್ತವಾಗ್ತಿದೆ.
ವಧುವಿನ ತಂದೆ ಯುಎಇ ಮೂಲದ ಪಾಕಿಸ್ತಾನಿ ಉದ್ಯಮಿಯಾಗಿದ್ದಾರೆ. ಸಾಂಪ್ರದಾಯಿಕವಾಗಿ ಮದುವೆಯನ್ನು ಅದರ ಮೇಲೆ ಖರ್ಚು ಮಾಡಿದ ಸಂಪತ್ತಿನ ಪ್ರಮಾಣದಿಂದ ಅಳೆಯಲಾಗುತ್ತದೆ.
ಹೆಚ್ಚಿನ ದಕ್ಷಿಣ ಏಷ್ಯಾದ ಕುಟುಂಬಗಳಲ್ಲಿ ಪ್ರತಿಷ್ಠೆಗಾಗಿ ಹೆಚ್ಚು ಹಣವನ್ನು ಮದುವೆಗಾಗಿ ಖರ್ಚು ಮಾಡುವುದು ಸಾಮಾನ್ಯವಾಗಿದೆ.
ಇತ್ತೀಚೆಗಷ್ಟೇ ದುಬೈನಲ್ಲಿ ಪಾಕಿಸ್ತಾನಿ ವಧುವನ್ನು ತಕ್ಕಡಿಯ ಒಂದು ಬದಿಯಲ್ಲಿ ಕೂರಿಸಿ , ಮತ್ತೊಂದು ಬದಿಯಲ್ಲಿ ಚಿನ್ನ ತೂಗಿಸಿ , ವಧುವಿನ ತೂಕದಷ್ಟೇ ಚಿನ್ನವನ್ನ ನೀಡಲಾಗಿದೆ.. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Bride measured in gold in Dubai🙈🙈.
Further proof that all the money in the world will not give class to classless individuals. pic.twitter.com/wfAMTJKCEL— Tawab Hamidi (@TawabHamidi) February 25, 2023
ವಧು ಆಕರ್ಷಣೆಯ ಕೇಂದ್ರಬಿಂದು ಆಕೆದ್ದಾಳೆ. ಆಕೆಯ ಮದುವೆಯ ಧರಿಸಿನಿಂದ ಹಿಡಿದು ಆಭರಣದವರೆಗೆ ಎಲ್ಲರ ಗಮನ ಸೆಳೆದಿದ್ದಾಳೆ. ಆದ್ರೆ ವರದಕ್ಷಿಣೆಯ ಪರೋಕ್ಷ ರೂಪದಲ್ಲಿ ಆಕೆಯಷ್ಟೇ ತೂಕದ ಚಿನ್ನವನ್ನ ತಂದೆ ವರನಿಗೆ ನೀಡಿರುವುದು ಈಗ ಮಕಟು ಟೀಕೆಗೆ ಗುರಿಯಾಗೋ ಹಾಗೆ ಮಾಡಿದೆ.
ವಧುವಿನ ತೂಕ ಸುಮಾರು 70 ಕೆ.ಜಿ… ಅಷ್ಟೇ ತೂಕದ ಚಿನ್ನವನ್ನ ಆಕೆಯ ಕುಟುಂಬವು ತಕ್ಕಡಿಯಲ್ಲಿ ಹಾಕುತ್ತಿದ್ದದ್ದು ಕಂಡುಬಂದಿದೆ.
Pakistani Bride , video Viral , pakistani bride wieghed against gold slabs in dubai ,