ತಾಲಿಬಾನಿಗಳ ತಂಟೆಗೆ ಬಂದ್ರೆ ಹುಷಾರ್.. ಅಫ್ಘಾನಿಸ್ತಾನಕ್ಕೆ ಎಚ್ಚರಿಸಿದ ಉಗ್ರರ ತವರು ಪಾಕ್ ..!
ಉಗ್ರರ ತವರುಮನೆಯಾಗಿರುವ ಪಾಕಿಸ್ತಾನ ಉಗ್ರರ ಲಾಲನೆ ಪಾಲನೆ ಮಾಡುತ್ತಲೇ ಇಂದು ಆರರ್ಥಿಕವಾಗಿ ಬಿಕಾರಿಯಾಗಿ ಚೀನಾದ ಗುಲಾಮವಾಗಿದೆ.. ಇದೀಗ ಅಫ್ಘಾನಿಸ್ಥಾನದ ಉಪಾಧ್ಯಕ್ಷ ಅಮರುಲ್ಲಾ ಸಾಲೇಹ್ ಪಾಕಿಸ್ತಾನದ ಮುಖವಾಡ ಕಳಚಿದ್ದಾರೆ. ಮತ್ತೊಮ್ಮೆ ಪಾಪಿ ಪಾಕಿಸ್ತಾನ ಜಗತ್ತಿನ ಎದುರು ಮಾನ ಮರ್ಯಾದೆ ಕಳೆದುಕೊಂಡಿದೆ..
ಹೌದು ಪಾಕಿಸ್ತಾನದ ತಾಲಿಬಾನಿಗಳಿಗೆ ಸಪೋರ್ಟ್ ಮಾಡ್ತಿರೋ ವಿಚಾರವನ್ನು ಅಮರುಲ್ಲಾ ಸಾಲೇಹ್ ಬಹಿರಂಪಡಿಸಿದ್ಧಾರೆ. ನಿನ್ನೆಯಷ್ಟೇ ತಾಲಿಬಾನಿಗಳು ಕಂದಹಾರ್ನ ಪಾಕ್ ಗಡಿಗೆ ಕೂಡಿಕೊಂಡಿರೋ ಸ್ಪಿನ್ ಬೋಲ್ಡಾಕ್ ಪ್ರದೇಶವನ್ನು ವಶಕ್ಕೆ ಪಡೆದಿರೋದಾಗಿ ಘೋಷಿಸಿಕೊಂಡಿದ್ವು. ಅದನ್ನು ಪಾಕಿಸ್ತಾನ ಕೂಡ ಸ್ಪಷ್ಟಪಡಿಸಿತ್ತು. ಆದ್ರೀಗ ತಾಲಿಬಾನಿಗಳ ಈ ಕೃತ್ಯಕ್ಕೆ ಪಾಕಿಗಳ ಸಪೋರ್ಟ್ ಇತ್ತಾ ಅನ್ನೋ ಅನುಮಾನ ಮೂಡಿದೆ. ಯಾಕಂದ್ರೆ ಈ ಪ್ರದೇಶದಿಂದ ತಾಲಿಬಾನಿಗಳನ್ನು ತೆರವುಗೊಳಿಸೋಕೆ ಯತ್ನಿಸಿದ್ರೆ, ಅವರಿಂದ ಈ ಪ್ರದೇಶವನ್ನು ವಶಕ್ಕೆ ಪಡೆಯಲು ಯತ್ನಿಸಿದ್ರೆ, ಅವರ ವಿರುದ್ಧ ಕ್ರಮಕ್ಕೆ ಮುಂದಾದ್ರೆ ನಮ್ಮ ವಾಯುಸೇನೆಯನ್ನು ಎದುರಿಸಬೇಕಾಗುತ್ತೆ ಅಂತ ಅಫ್ಘಾನಿಸ್ಥಾನಕ್ಕೆ ಬೆದರಿಕೆ ಹಾಕಿದೆ.
ಈ ವಿಚಾರವನ್ನು ಅಮರುಲ್ಲಾ ಸಾಲೇಹ್ ಬಹಿರಂಗಪಡಿಸಿದ್ದಾರೆ. ಹೀಗೆ ನಾವು ಗಡಿ ಬಂದ್ ಮಾಡ್ತೀವಿ.. ಹಂಗೆ ಹಿಂಗೆ ಅಂತ ಹೇಳ್ಕೊಂಡೇ ತಾಲಿಬಾನಿಗಳಿಗೆ ಪಾಕ್ ಬೆಂಬಲ ಕೊಡ್ತಾನೇ ಇದೆ. ಅತ್ತ ತಾಲಿಬಾನಿಗಳು ಪ್ರಮುಖ ಪ್ರದೇಶಗಳನ್ನು ವಶಕ್ಕೆ ಪಡೆಯುತ್ತಲೇ ಇದ್ದಾರೆ. ವಶಕ್ಕೆ ಪಡೆದ ಪ್ರದೇಶಗಳಲ್ಲಿ ಸರ್ಕಾರಿ ಕಟ್ಟಡಗಳನ್ನು ಬಂದ್ ಮಾಡ್ತಿದೆ. ಈ ಭಾಗಗಳಲ್ಲಿ ಆಸ್ಪತ್ರೆ ಕೂಡ ತೆರೆಯುತ್ತಿಲ್ಲ. 116 ಜಿಲ್ಲೆಗಳಲ್ಲಿ ಈವರೆಗೆ 260 ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಯುದ್ಧಪೀಡಿತ ಅಫ್ಘಾನಿಸ್ಥಾನದಿಂದ ಅಮೆರಿಕಾ ತನ್ನ ಸೇನೆ ಹಿಂಪಡೆದ ನಂತರ ತಾಲೀಬಾನ್ ಉಗ್ರರ ಅಟ್ಟಹಾಸ ಹೆಚ್ಚಾಗಿದ್ದು, ಗಲಭೆಯ ವಾತಾವರಣ ಸೃಷ್ಟಿಯಾಗಿದೆ..