ಡೆಂಗ್ಯೂನಂತಹ ಗಂಭೀರ ಕಾಯಿಲೆಗಳಿಗೆ ರಾಮಬಾಣ ಪಪ್ಪಾಯಿ ಎಲೆಗಳು – ಪಪ್ಪಾಯಿ ಎಲೆಗಳನ್ನು ಉಪಯೋಗಿಸುವ ವಿಧಾನ
ಪಪ್ಪಾಯಿಯನ್ನು ಅತ್ಯಂತ ಆರೋಗ್ಯಕರ ಹಣ್ಣು ಎಂದು ಪರಿಗಣಿಸಲಾಗಿದೆ. ಇದರ ತಿರುಳು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯಾಗಿದೆಯೋ, ಅದರ ಎಲೆಗಳು ಕೂಡ ಅಷ್ಟೇ ಪ್ರಯೋಜನಕಾರಿಯಾಗಿದೆ. ವಿಶೇಷವಾಗಿ, ಮಳೆಗಾಲದಲ್ಲಿ ಸೊಳ್ಳೆಗಳ ಹರಡುವಿಕೆಯು ಹೆಚ್ಚಾದಾಗ ಮತ್ತು ಜನರು ಡೆಂಗ್ಯೂನಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿರುವಾಗ, ಪಪ್ಪಾಯಿ ಎಲೆಗಳು ಬಹಳ ಪ್ರಯೋಜನಕಾರಿಯಾಗಿದೆ. ಡೆಂಗ್ಯೂ ಇದ್ದಾಗ, ಒಬ್ಬ ವ್ಯಕ್ತಿಗೆ ತೀವ್ರ ಜ್ವರದಿಂದ ದೇಹದಲ್ಲಿ ಮೈ ಕೈ ನೋವು, ಕೀಲು ನೋವು ಉಂಟಾಗುತ್ತದೆ. ಇದಲ್ಲದೆ, ವ್ಯಕ್ತಿಯ ಪ್ಲೇಟ್-ಲೆಟ್‌ಗಳು ಸಹ ಕಡಿಮೆಯಾಗುತ್ತದೆ. ಈ ಸಂದರ್ಭದಲ್ಲಿ, ಪಪ್ಪಾಯಿ ಎಲೆಗಳನ್ನು ಸೇವಿಸಿದರೆ ಪ್ಲೇಟ್-ಲೆಟ್‌ಗಳ ಸಂಖ್ಯೆ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಪಪ್ಪಾಯಿ ಎಲೆಗಳ ಪ್ರಯೋಜನಗಳು ಮತ್ತು ಅದನ್ನು ಬಳಸುವ ವಿಧಾನಗಳನ್ನು ತಿಳಿದುಕೊಳ್ಳೋಣ.
ಇದು ಹೇಗೆ ಕಾರ್ಯನಿರ್ವಹಿಸುತ್ತದೆ
ಪಪ್ಪಾಯಿ ಎಲೆಗಳಲ್ಲಿ ಫೀನಾಲಿಕ್, ಪಪೈನ್ ಮತ್ತು ಆಲ್ಕಲಾಯ್ಡ್ಗಳು ಕಂಡುಬರುತ್ತವೆ. ಇದು ಆಂಟಿ-ಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ದೇಹಕ್ಕೆ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ನೀಡುತ್ತದೆ.
ಇದರ ಜೊತೆಯಲ್ಲಿ, ದೇಹದಲ್ಲಿನ ಪ್ರೋಟೀನ್ ಗಳ ಜೀರ್ಣಕ್ರಿಯೆಗೆ ಪ್ಯಾಪೈನ್ ಮತ್ತು ಇತರ ಅಂಶಗಳು ಸಹಕಾರಿಯಾಗುತ್ತವೆ, ಇದರಿಂದಾಗಿ ಜೀರ್ಣಕಾರಿ ಅಸ್ವಸ್ಥತೆಗಳು ನಿವಾರಣೆಯಾಗುತ್ತವೆ. ಒಂದು ಅಧ್ಯಯನದ ಪ್ರಕಾರ, ಪಪ್ಪಾಯಿ ಎಲೆಗಳ ಸೇವನೆಯು ಪ್ಲೇಟ್‌ಲೆಟ್ ಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಡೆಂಗ್ಯೂ ರೋಗಿಗಳು ಬೇಗನೆ ಚೇತರಿಸಿಕೊಳ್ಳುತ್ತಾರೆ. ಅದೇ ಸಮಯದಲ್ಲಿ, ಪಪ್ಪಾಯಿ ಎಲೆಗಳಲ್ಲಿ ಕಂಡುಬರುವ ಅಪಟೋಜೆನಿನ್ ಅಂಶವು ಮಲೇರಿಯಾ ಮತ್ತು ಡೆಂಗ್ಯೂನಂತಹ ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ.
ನೀವು ಸಹ ಡೆಂಗ್ಯೂ ವಿರುದ್ಧ ಹೋರಾಡಲು ಪಪ್ಪಾಯಿ ಎಲೆಗಳನ್ನು ಉಪಯೋಗಿಸಲು ಬಯಸಿದರೆ, ಅದನ್ನು ಬಳಸುವ ವಿಧಾನವನ್ನು ಇಲ್ಲಿ ತಿಳಿಸಿದ್ದೇವೆ.
1. ಮೊದಲನೆಯದಾಗಿ, ಪಪ್ಪಾಯಿ ಎಲೆಗಳನ್ನು ಚೆನ್ನಾಗಿ ತೊಳೆದು ನಂತರ ನೀರನ್ನು ಒರೆಸಿ ತೆಗೆಯಿರಿ. ಈಗ ಈ ಎಲೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಬಳಿಕ ಈ ಎಲೆಗಳನ್ನು ಬಾಣಲೆಯಲ್ಲಿ ಹಾಕಿ ಸುಮಾರು ಎರಡು ಲೀಟರ್ ನೀರನ್ನು ಒಟ್ಟಿಗೆ ಸೇರಿಸಿ ಕುದಿಸಿ. ಇದು ಕುದಿಯಲು ಪ್ರಾರಂಭಿಸಿದಾಗ, ಶಾಖವನ್ನು ನಿಧಾನಗೊಳಿಸಿ ಮತ್ತು ನೀರು ಅರ್ಧದಷ್ಟು ಉಳಿಯುವವರೆಗೆ ಕುದಿಸಿ. ಈಗ ಈ ನೀರನ್ನು ಫಿಲ್ಟರ್ ಮಾಡಿ ಸೇವಿಸಿ.
2. ಸ್ವಲ್ಪ ಪಪ್ಪಾಯಿ ಎಲೆಗಳನ್ನು ತೆಗೆದುಕೊಂಡು ಅದನ್ನು ಮೊದಲು ನೀರು ಬೆರೆಸದೆ ರುಬ್ಬಿ. ಈಗ ಅದರ ರಸವನ್ನು ಹಿಂಡಿ ತೆಗೆದು ಎರಡು ಟೀ ಚಮಚ ರಸವನ್ನು ದಿನಕ್ಕೆ ಎರಡು ಬಾರಿ ಸೇವಿಸಿ. ನಿಮಗೆ ಶೀಘ್ರದಲ್ಲೇ ಪರಿಹಾರ ಸಿಗುತ್ತದೆ.
3. ಅಷ್ಟೇ ಅಲ್ಲ, ಮಾಗಿದ ಪಪ್ಪಾಯಿ ಕೂಡ ಡೆಂಗ್ಯೂ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ಇದಕ್ಕಾಗಿ, ಮಾಗಿದ ಪಪ್ಪಾಯಿಯ ರಸವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಮತ್ತು ಈ ರಸವನ್ನು ದಿನಕ್ಕೆ ಕನಿಷ್ಠ ಎರಡು-ಮೂರು ಬಾರಿ ಸೇವಿಸಿ. ಇದು ನಿಮ್ಮ ಡೆಂಗ್ಯೂ ಜ್ವರವನ್ನು ಶೀಘ್ರದಲ್ಲಿಯೇ ಗುಣಪಡಿಸುತ್ತದೆ.