ಹೈದರಾಬಾದ್ : ಮಹಾಮಾರಿ ಕೊರೊನಾ ವಿರುದ್ಧದ ಹೋರಾಟಕ್ಕೆ ಸಿನಿ ತಾರೆಯರು ಕೈ ಜೋಡಿಸಿದ್ದು, ತಮ್ಮ ಕೈಲಾದ ಮಟ್ಟಿಗೆ ಧನಸಹಾಯ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ , ಕೊರೊನಾ ಹೋರಾಟಕ್ಕೆ 2 ಕೋಟಿ ನೀಡೋದಾಗಿ ಘೋಷಿಸಿದ್ರು. ಇದರ ಬೆನ್ನಲ್ಲೆ ತಮ್ಮ ಚಿಕ್ಕಪ್ಪನ ಪ್ರೇರಣೆಯಿಂದ ಮೆಗಾ ಪವರ್ ಸ್ಟಾರ್ ರಾಮ್ ಚರಣ್ 70 ಲಕ್ಷ ರೂಪಾಯಿ ದೇಣಿಗೆ ಕೊಟ್ಟಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪವನ್ ಕಲ್ಯಾಣ್ ಅವರಿಂದ ಪ್ರೇರಣೆಯಾಗಿ, ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಪಡುತ್ತಿರುವ ಶ್ರಮಕ್ಕೆ ನನ್ನ ಕೈಲಾದ ಕೊಡುಗೆ ನೀಡುತ್ತಿದ್ದೇನೆ. ಎಲ್ಲರೂ ಮನೆಯಲ್ಲೇ ಇದ್ದು, ಸುರಕ್ಷಿತವಾಗಿದ್ದೀರಿ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಪಟಾಕಿ ಸಂಪೂರ್ಣ ನಿಷೇಧವಿಲ್ಲ, ಅನಿಯಂತ್ರಿತ ಬಳಕೆಗೂ ಅವಕಾಶವಿಲ್ಲ: ಸುಪ್ರೀಂಕೋರ್ಟ್
ದೀಪಾವಳಿ ಸೇರಿದಂತೆ ಹಬ್ಬಗಳ ಸಂದರ್ಭದಲ್ಲಿ ಪಟಾಕಿ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ನಿಲುವು ವ್ಯಕ್ತಪಡಿಸಿದೆ. ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಹೇರುವುದಿಲ್ಲ, ಆದರೆ ದಿನದ 24 ಗಂಟೆಯೂ...








