ನವದೆಹಲಿ : ದೇಶದಲ್ಲಿ ಸತತ 14ನೇ ದಿನವೂ ತೈಲ ಬೆಲೆ ಏರಿಕೆ ಆಗಿದೆ. ಎಚ್‌ಪಿಸಿಎಲ್, ಬಿಪಿಸಿಎಲ್, ಐಒಸಿ ಇಂದು ಪೆಟ್ರೋಲ್-ಡೀಸೆಲ್ ಬೆಲೆಯನ್ನು ಸತತ 14 ನೇ ದಿನವೂ ಕೂಡ ಹೆಚ್ಚಳ ಮಾಡಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಗೆ 51 ಪೈಸೆ ಏರಿಕೆಯಾಗಿದ್ದು, ಡೀಸೆಲ್ 61 ಪೈಸೆ ಹೆಚ್ಚಳಗೊಂಡಿದೆ. ಅಲ್ಲಿ ಪೆಟ್ರೋಲ್ 78.88 ಆಗಿದ್ದರೆ, ಡೀಸೆಲ್ 77.67 ಆಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 57 ಪೈಸೆ ಏರಿದ್ದು, 81.44 ಆಗಿದೆ. ಡೀಸೆಲ್ ಬೆಲೆ 62 ಪೈಸೆ ಏರಿಕೆಯಾಗಿದ್ದು, 73.86 ಆಗಿದೆ.
ಇನ್ನು ನೋಯ್ಡಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 79.90 ರೂ ಇದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 70.33 ರೂ ಇದೆ. ಲಕ್ನೋದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 79.79 ರೂ ಇದ್ದರೇ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 70.25 ರೂ ಇದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 85.70 ರೂ ಆಗಿದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 76.11 ರೂ ಇದೆ.