PM Kisan Samman Nidhi : ಯುಗಾದಿ ಹಬ್ಬಕ್ಕೆ ರೈತರಿಗೆ ಬಂಪರ್ ಗಿಫ್ಟ್..!!!
ಕಿಸಾನ್ ಸಮ್ಮಾನ್ ನಿಧಿ ಯೋಜನೆ
ರೈತರಿಗೆ ಯುಗಾದಿ ಗಿಫ್ಟ್
ರೈತರಿಗೆ ಖಾತೆಗೆ ಇಂದಿನಿಂದ ಹಣ ಜಮಾ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್
ಕೇಂದ್ರ ಸರ್ಕಾರದಿಂದ 6000 , ರಾಜ್ಯದಿಂದ 4000 ರೂ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಇಂದು ರಾಜ್ಯದ 48,75,000 ರೈತರ ಖಾತೆಗಳಿಗೆ 975 ಕೋಟಿ ರೂಪಾಯಿಯನ್ನ ನೇರವಾಗಿ ಜಮಾ ಮಾಡುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ..
ಈ ಮೂಲಕ ರಾಜ್ಯದ ರೈತರಿಗೆ ಯುಗಾದಿ ಹಬ್ಬಕ್ಕೆ ಬಂಪರ್ ಗಿಫ್ಸ್ ನೀಡಿದ್ದಾರೆ..
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 2022-23ನೇ ಸಾಲಿನ 2 ನೇ ಕಂತಿನ ಆರ್ಥಿಕ ನೆರವನ್ನ
ರೈತರ ಖಾತೆಗಳಿಗೆ ನೇರವಾಗಿ ಜಮಾಕ್ಕೆ ಇಂದು ಚಾಲನೆ ನೀಡಲಿದ್ದೇನೆ ಎಂದಿದ್ದಾರೆ.
ಪಿಎಂ ಕಿಸಾನ್–ಕರ್ನಾಟಕ ವಿಭಾಗದಿಂದ ಈ ನಿಧಿ ಜಮಾ ಆಗುತ್ತಿದೆ. ಭಾರತದಲ್ಲಿರುವ ಭೂಹಿಡುವಳಿ ಹೊಂದಿರುವ ರೈತರಿಗೆ ಆದಾಯ ಬೆಂಬಲ ಒದಗಿಸುವ ಯೋಜನೆ ಇದಾಗಿದೆ. ಕೇಂದ್ರದಿಂದ 6000 ರೂ ಹಾಗೂ ರಾಜ್ಯದಿಂದ 4000 ಸೇರಿ ಒಟ್ಟು 10000 ರೂಪಾಯಿಗಳನ್ನ ರೈತರಿಗೆ ನೆರವು ನೀಡಲಾಗುತ್ತಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
PM Kisan Samman Nidhi : Bumper gift to farmers for Ugadi festival..!!!