ಗುಜರಾತ್ ನ ಜಾಮ್ ನಗರದಲ್ಲಿ WHO ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ ಉದ್ಘಾಟಿಸಿದ ಮೋದಿ

1 min read

ಗುಜರಾತ್ ನ ಜಾಮ್ ನಗರದಲ್ಲಿ WHO ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ ಉದ್ಘಾಟಿಸಿದ ಮೋದಿ

ಇಂದು ಗುಜರಾತ್‌ನ ಜಾಮ್‌ನಗರದಲ್ಲಿ WHO ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ – GCTM ಗೆ ಶಂಕುಸ್ಥಾಪನೆಯನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೆರವೇರಿಸಿದರು.  ಈ ಸಂದರ್ಭದಲ್ಲಿ ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನೌತ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಘೆಬ್ರೆಯೆಸಸ್ ಉಪಸ್ಥಿತರಿದ್ದರು.

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಭೂತಾನ್‌ನ ಪ್ರಧಾನಿ ಲೋಟೆ ತ್ಶೆರಿಂಗ್ ಮತ್ತು ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ವೀಡಿಯೊ ಸಂದೇಶದ ಮೂಲಕ WHO ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ -GCTM ಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್, ಜಾಮ್‌ನಗರದಲ್ಲಿ WHO ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ – ಜಿಸಿಟಿಎಂ ಸ್ಥಾಪನೆಗೆ ಸಂತೋಷ ವ್ಯಕ್ತಪಡಿಸಿದರು. WHO ಗ್ಲೋಬಲ್ ಸೆಂಟರ್‌ಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡಿದ್ದಕ್ಕಾಗಿ ಅವರು ಪ್ರಧಾನಿ ಮೋದಿಯವರಿಗೆ ಧನ್ಯವಾದಗಳನ್ನು ಹೇಳಿದರು.

GCTM ಪ್ರಪಂಚದಾದ್ಯಂತ ಸಾಂಪ್ರದಾಯಿಕ ಔಷಧಕ್ಕಾಗಿ ಮೊದಲ ಮತ್ತು ಏಕೈಕ ಜಾಗತಿಕ ಕೇಂದ್ರವಾಗಿದೆ. ಇದು ಜಾಗತಿಕ ಸ್ವಾಸ್ಥ್ಯದ ಅಂತಾರಾಷ್ಟ್ರೀಯ ಕೇಂದ್ರವಾಗಿ ಹೊರಹೊಮ್ಮಲಿದೆ. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಕೇಂದ್ರ ಆಯುಷ್ ಸಚಿವ ಸರ್ಬಾನಂದ್ ಸೋನೋವಾಲ್ ಉಪಸ್ಥಿತರಿದ್ದರು. ಪ್ರಧಾನಿ ಮೋದಿ ಸೋಮವಾರ ಸಂಜೆಯಿಂದ ತಮ್ಮ ತವರು ರಾಜ್ಯ ಗುಜರಾತ್‌ಗೆ 3 ದಿನಗಳ ಭೇಟಿಯಲ್ಲಿದ್ದಾರೆ.

ಇದಕ್ಕೂ ಮುನ್ನ ಜಾಮ್‌ನಗರ ತಲುಪಿದ ನಂತರ, ಪ್ರಧಾನಿ ಮೋದಿ ಇಂದು 83 ವರ್ಷ ವಯಸ್ಸಿನ  ರಾಜಮನೆತನದ ಸದಸ್ಯ ಜಾಮ್ ಸಾಹೇಬ್ ಶ್ರೀ ಶತ್ರುಶಲ್ಯಸಿಂಹಜಿ ದಿಗ್ವಿಜಯಸಿಂಹಜಿ ಜಡೇಜಾ ಅವರನ್ನ ಬೇಟಿಯಾದರು.  ಜಾಮ್ ಸಾಹೇಬ್ ಅವರ ಕುಟುಂಬದ ಸದ್ಭಾವನೆ ಪ್ರಪಂಚದಾದ್ಯಂತ, ವಿಶೇಷವಾಗಿ ಯುರೋಪಿನಲ್ಲಿ ಹರಡಿದೆ.  ಜಾಮ್ ಸಾಹೇಬ್ ಶ್ರೀ ಶತ್ರುಶಲ್ಯಸಿಂಹಜಿ ಅವರು ಹಿರಿಯರಾಗಿ ಯಾವಾಗಲೂ ನನ್ನ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದಾರೆ. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ನಾವು ಬಹಳ ಸಮಯ ಕಳೆದಿದ್ದೇವೆ ಎಂದು ಮೋದಿ ಹೇಳಿದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd