ಹನುಮ ಜಯಂತಿ – 108 ಅಡಿ ಎತ್ತರದ ಹನುಮಾನ್ ಪ್ರತಿಮೆ ಆನಾವರಣಗೊಳಿಸಿದ ಮೋದಿ

1 min read

ಹನುಮ ಜಯಂತಿ – 108 ಅಡಿ ಎತ್ತರದ ಹನುಮಾನ್ ಪ್ರತಿಮೆ ಆನಾವರಣಗೊಳಿಸಿದ ಮೋದಿ

ಹನುಮ ಜಯಂತಿಯನ್ನ ಇಂದು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೇಶದ ಎಲ್ಲಾ ದೇವಸ್ಥಾನಗಳಲ್ಲಿ ಬೆಳಗಿನಿಂದಲೇ ಪೂಜೆ ಪುನಸ್ಕಾರಗಳು ಶುರುವಾಗಿವೆ.

ಗುಜರಾತಿನ ಮೋರ್ಬಿಯಲ್ಲಿ ಸ್ಥಾಪಿಸಲಾಗುತ್ತಿರುವ 108 ಅಡಿ ಎತ್ತರದ ಹನುಮಾನ್ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು  ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅನಾವರಣಗೊಳಿಸಿದರು. ಹನುಮಾನ್ ಜಿ ಚಾರ್ ಧಾಮ್ ಯೋಜನೆಯ ಭಾಗವಾಗಿ, ಈ ಪ್ರತಿಮೆಯು ದೇಶಾದ್ಯಂತ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಲಾಗುತ್ತಿರುವ ನಾಲ್ಕು ಪ್ರತಿಮೆಗಳಲ್ಲಿ ಇದು ಎರಡನೆಯದು.

ಇದನ್ನು ಪಶ್ಚಿಮದಲ್ಲಿ ಮೊರ್ಬಿಯಲ್ಲಿರುವ ಬಾಪು ಕೇಶವಾನಂದರ ಆಶ್ರಮದಲ್ಲಿ ಸ್ಥಾಪಿಸಲಾಗಿದೆ. ಈ ಸರಣಿಯ ಮೊದಲ ಪ್ರತಿಮೆಯನ್ನು 2010 ರಲ್ಲಿ ಉತ್ತರದಲ್ಲಿ ಶಿಮ್ಲಾದಲ್ಲಿ ಸ್ಥಾಪಿಸಲಾಯಿತು. ದಕ್ಷಿಣದಲ್ಲಿ ರಾಮೇಶ್ವರಂನಲ್ಲಿ ಪ್ರತಿಮೆಯ ಕೆಲಸವನ್ನು ಪ್ರಾರಂಭಿಸಲಾಗಿದೆ.

PM Modi to unveil 108-feet statue of Lord Hanuman at Morbi in Gujarat today on occasion of Hanuman Jayanti

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd