ದೇಶವನ್ನುದ್ದೇಶಿಸಿ ಸುದೀರ್ಘ 83 ನಿಮಿಷಗಳ ಕಾಲ ಮಾತನಾಡಿದ ಪ್ರಧಾನಿ ಮೋದಿ..
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಕೆಂಪು ಕೋಟೆಯಿಂದ ಒಂಬತ್ತನೇ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. 76ನೇ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಿಂದ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ 83 ನಿಮಿಷಗಳ ಕಾಲ ದೇಶವನ್ನುದ್ದೇಶಿಸಿ ಮಾತನಾಡಿದರು. ಇದಕ್ಕೂ ಮುನ್ನ 2021ರ ಸ್ವಾತಂತ್ರ್ಯ ದಿನದಂದು ಪ್ರಧಾನಿ 88 ನಿಮಿಷಗಳ ಕಾಲ ಮಾತನಾಡಿದರು. 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ನಂತರ ಮೋದಿ ದೇಶವನ್ನುದ್ದೇಶಿಸಿ 65 ನಿಮಿಷಗಳ ಕಾಲ ಭಾಷಣ ಮಾಡಿದರು.
2015ರಲ್ಲಿ ನೆಹರೂ ಅವರ ದಾಖಲೆ ಮುರಿದಿದ್ದರು
2015 ರಲ್ಲಿ ಪ್ರಧಾನಿ ಮೋದಿ ಅವರು 86 ನಿಮಿಷಗಳ ಭಾಷಣ ಮಾಡುವ ಮೂಲಕ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಮುರಿದರು. ನೆಹರು 1947ರಲ್ಲಿ ಕೆಂಪು ಕೋಟೆಯಿಂದ 72 ನಿಮಿಷಗಳ ಸುದೀರ್ಘ ಭಾಷಣ ಮಾಡಿದರು.
ಇಲ್ಲಿಯವರೆಗೆ ಪ್ರಧಾನಿ ಒಂಬತ್ತು ಬಾರಿ ಕೆಂಪು ಕೋಟೆಯಿಂದ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಕೇವಲ ಒಂದು ಭಾರಿ ಒಂದು ಗಂಟೆಗೂ ಕಡಿಮೆ ಕಾಲ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. 2017ರ ಸ್ವಾತಂತ್ರ್ಯ ದಿನದಂದು ಪ್ರಧಾನಿ ಕೇವಲ 56 ನಿಮಿಷಗಳ ಕಾಲ ಮಾತನಾಡಿದ್ದರು. ಇದು ಅವರ ಚಿಕ್ಕ ಭಾಷಣ.
ಯಾವ ಯಾವ ಸ್ವಾತಂತ್ರ್ಯ ದಿನದಂದು ಮೋದಿ ಎಷ್ಟು ನಿಮಿಷ ಮಾತನಾಡಿದ್ದಾರೆ ಎಂಬುದನ್ನ ನೋಡಿದರೆ. 2014 ರಲ್ಲಿ 65 ನಿಮಿಷಗಳು, 2015 ರಲ್ಲಿ 86 ನಿಮಿಷಗಳು, 2016 ರಲ್ಲಿ 96 ನಿಮಿಷಗಳು, 2017 ರಲ್ಲಿ 56 ನಿಮಿಷಗಳು, 2018 ರಲ್ಲಿ 82 ನಿಮಿಷಗಳು, 2019 ರಲ್ಲಿ 93 ನಿಮಿಷಗಳು, 2020 ರಲ್ಲಿ 86 ನಿಮಿಷಗಳು, 2021 ರಲ್ಲಿ 88 ನಿಮಿಷಗಳು ಮತ್ತು 2021 ರಿಂದ 83 ನಿಮಿಷಗಳು.