ಕೋಲ್ಕತ್ತಾ: ಬಿಸಿಸಿಐಗೆ ಕೋಲ್ಕತ್ತಾ ಪೊಲೀಸರು ನೋಟಿಸ್ ನೀಡಿರುವ ಘಟನೆ ನಡೆದಿದೆ.
ಈಡನ್ ಗಾರ್ಡನ್ಸ್ನಲ್ಲಿ (Eden Gardens) ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಧ್ಯೆ ನಡೆದ ವಿಶ್ವಕಪ್ (World Cup) ಕ್ರಿಕೆಟ್ (Cricket) ಪಂದ್ಯದ ಟಿಕೆಟ್ಗಳು ಬ್ಲ್ಯಾಕ್ ಮಾರ್ಕೆಟಿಂಗ್ ನಲ್ಲಿ ಮಾರಾಟವಾದ ಆರೋಪದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ.
ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ (Roger Binny) ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಟಿಕೆಟ್ ಗಳ ಬ್ಲ್ಯಾಕ್ ಮಾರ್ಕೆಟಿಂಗ್ (Black Marketing) ಕುರಿತ ದೂರುಗಳ ತನಿಖೆ ನಡೆಸುತ್ತಿರುವ ಮೈದಾನ ಪೊಲೀಸರಿಗೆ ದಾಖಲೆ ಸಲ್ಲಿಸುವಂತೆ ತಿಳಿಸಲಾಗಿದೆ.