ದೆಹಲಿಯಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಕೊರಿಯಾ ಪ್ರಜೆಯಿಂದ 5 ಸಾವಿರ ರೂ. ಲಂಚ ಪಡೆದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೀಗಾಗಿ ಆರೋಪಿ ಪೊಲೀಸ್ ನನ್ನು ಅಮಾನತುಗೊಳಿಸಲಾಗಿದೆ. ಕೊರಿಯನ್ ಪ್ರಜೆ ತನ್ನ ಕಾರಿನೊಳಗೆ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಲಂಚದ ಇಡೀ ಘಟನೆಯನ್ನು ಚಿತ್ರೀಕರಿಸಿದ್ದಾರೆ.
ಹಣ ಪಡೆದಿರುವ ಪೊಲೀಸ್, ಕೊರಿಯನ್ ಪ್ರಜೆಗೆ ರಶೀದಿ ನೀಡಿಲ್ಲ. ಇದನ್ನು ಗಮನಿಸಿದ ಪೊಲೀಸ್ ಹಿರಿಯ ಅಧಿಕಾರಿಗಳು, ಸಂಬಂಧಿತ ಅಧಿಕಾರಿಯನ್ನು ವಿಚಾರಣೆಗೆ ಬಾಕಿಯಿರುವಂತೆ ಅಮಾನತುಗೊಳಿಸಲಾಗಿದೆ. ದೆಹಲಿ ಪೊಲೀಸರು ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದ್ದಾರೆ ಎಂದು ದೆಹಲಿ ಟ್ರಾಫಿಕ್ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಕೊರಿಯರ್ ಪ್ರಜೆ ದೆಹಲಿ ಪೊಲೀಸನ ಲಂಚ ಪ್ರಕರಣದ ಕುರಿತ ವಿಡಿಯೋವನ್ನು ತಮ್ಮ ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡಿದ್ದು, 1.34 ಮಿಲಿಯನ್ ಜನರು ಇದನ್ನು ನೋಡಿದ್ದಾರೆ. ವಿಡಿಯೋದಲ್ಲಿ ಟ್ರಾಫಿಕ್ ಪೊಲೀಸ್ ನನ್ನು ಹೇಗಿದ್ದೀರಾ ಎಂದು ವಿದೇಶಿ ಪ್ರಜೆ ಕೇಳಿದ್ದಾರೆ. ಇದಕ್ಕೆ ಉತ್ತರವಾಗಿ ಪೊಲೀಸ್ ದಾರಿ ತಪ್ಪಿದೆ ಎಂದು ಹೇಳುತ್ತಾನೆ. ನಂತರ ಟ್ರಾಫಿಕ್ ಪೊಲೀಸ್ 5 ಸಾವಿರ ರೂ. ಗಳ ಕೋರ್ಟ್ ದಂಡ ತೆರಬೇಕು ಎಂದು ಹೇಳಿದ್ದಾನೆ.
ಆಗ ಇದನ್ನು ಆ ಪ್ರಜೆ ಪ್ರಶ್ನಿಸಿದ್ದಾರೆ. ಮೊದಲು ಕೊರಿಯನ್ ಪ್ರಜೆ 500 ರೂ. ನೀಡುತ್ತಾರೆ. ಆದರೆ, ಆಗ ಪೊಲೀಸ್, 5 ಸಾವಿರ ಎಂದು ಹೇಳುತ್ತಾರೆ. 5 ಸಾವಿರ ರೂ. ಪಡೆದ ಪೊಲೀಸ್, 500 ರೂ.ವನ್ನು ಮರಳಿ ಪ್ರಜೆಗೆ ನೀಡಲು ಯತ್ನಿಸಿ, ತಾನು ಪ್ರಾಮಾಣಿಕ ಎಂಬುವುದನ್ನು ತೋರಿಸಲು ಯತ್ನಿಸಿದ್ದಾನೆ. ಆದರೂ ಯಾವುದೇ ರಶೀದಿಯನ್ನು ಆ ವ್ಯಕ್ತಿಗೆ ಪೊಲೀಸ್ ನೀಡಿಲ್ಲ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.