ಭ್ರಷ್ಟಾಚಾರ ಹಾಗೂ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳದ ಸಹೋದ್ಯೋಗಿ ಪೊಲೀಸರ ವಿರುದ್ಧ ಹೋಮ್ ಗಾರ್ಡ್ ಪೊಲೀಸ್ ಒಬ್ಬರು ಪ್ರತಿಭಟನೆ ನಡೆಸಿದ್ದಾರೆ. ಪಂಜಾಬ್ ನ ಜಲಂಧರ್ ಹೆದ್ದಾರಿಯಲ್ಲಿ ಅವರು ಮಲಗಿ ಪ್ರತಿಭಟನೆ ನಡೆಸಿದ್ದಾರೆ.
ಹೀಗಾಗಿ ಜಲಂಧರ್-ಪಠಾಣ್ ಕೋಟ್ ಹೆದ್ದಾರಿಯಲ್ಲಿ ಕೆಲವು ಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಈ ಕುರಿತು ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ನಾನು ಕಳ್ಳನನ್ನು ಹಿಡಿದು ಒಪ್ಪಿಸಿದೆ. ಆದರೆ, ನನ್ನ ಠಾಣೆಯ ಪೊಲೀಸರು ಲಂಚ ತೆಗೆದುಕೊಂಡು, ಕಳ್ಳನನ್ನು ಬಿಟ್ಟಿದ್ದಾರೆ ಎಂದು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ.
ಪೊಲೀಸರು ಆತನನ್ನು ಸ್ಥಳದಿಂದ ಬಲವಂತವಾಗಿ ಕರೆದುಕೊಂಡು ಹೋಗಿ, ಸಂಚಾರ ಸುಗಮಗೊಳಿಸಲಾಯಿತು. ಆರೋಪಿ ಕೋರ್ಟ್ ನಿಂದ ಜಾಮೀನು ತೆಗೆದುಕೊಂಡ ಕಾರಣ, ಆತನನ್ನು ಬಿಡಲಾಗಿದೆ ಎದು ಬೋಗ್ಪುರ್ ಪೊಲೀಸ್ ಠಾಣೆ ಅಧಿಕಾರಿಗ ಹೇಳಿದ್ದಾರೆ.