ಬೆಂಗಳೂರು: ಒಂದೇ ವರ್ಷದಲ್ಲಿ ನೂರು ಕೋಟಿ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ನಗರ ಪೊಲೀಸರು (Bengaluru City Police) ಡ್ರಗ್ಸ್ (Drugs) ನ್ನು ವಶಕ್ಕೆ ಪಡೆದಿದ್ದಾರೆ. 2023ರಲ್ಲಿ ಒಟ್ಟು ಇದುವರೆಗೆ ನೂರು ಕೋಟಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಕೊನೆಯ ನಾಲ್ಕು ತಿಂಗಳುಗಳಲ್ಲಿಯೇ ಭರ್ಜರಿ ಬೇಟೆಯಾಡಿದ ಪೊಲೀಸರು ಬರೋಬ್ಬರಿ 60 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.
ಇಲ್ಲಿಯವರೆಗೆ ಮೂರು ಸಾವಿರ ಡ್ರಗ್ಸ್ ಪೆಡ್ಲರ್ಸ್ಗಳನ್ನು ಬಂಧಿಸಿದ್ದಾರೆ. ವಿದೇಶಿ ಡ್ರಗ್ಸ್ ಪೆಡ್ಲರ್ಸ್ ಗಳೇ ಹೆಚ್ಚಿನ ಪ್ರಮಾಣದಲ್ಲಿ ಡ್ರಗ್ಸ್ ಸರಬರಾಜು ಮಾಡಿದ್ದಾರೆ ಎನ್ನಲಾಗಿದೆ. ಈ ವರ್ಷ ಪ್ರತಿ ತಿಂಗಳು 5 ಕೋಟಿ ರೂ.ಗೂ ಅಧಿಕ ಮೌಲ್ಯದ ಸರಾಸರಿ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.