ಯಶ್ ಚಿತ್ರಕ್ಕಾಗಿ ಕನ್ನಡಕ್ಕೆ ಬರ್ತಾಳಾ ? ಬುಟ್ಟಬೊಮ್ಮ ಪೂಜಾ…
ಕೆಜಿಎಫ್ 2 ನಂತರ ಪ್ಯಾನ್ ಇಂಡಿಯನ್ ಸ್ಟಾರ್ ಆಗಿ ಹೊರಹೊಮ್ಮಿರುವ ಯಶ್ ಮುಂದಿನ ಸಿನಿಮಾ ಅಪ್ ಡೇಟ್ ಗಳಿಗಾಗಿ ಜಾತಕ ಪಕ್ಷಿಯಂತೆ ಕಾಯ್ತಿದ್ದಾರೆ.. ಈ ನಡುವೆ ಒಂದು ಧಮಾಕೆದಾರ್ ಸುದ್ದಿ ಯಶ್ ಮುಂದಿನ ಸಿನಿಮಾ ಬಗ್ಗೆ ಹರಿದಾಡ್ತಿದೆ..
ಅದೇನೆಂದ್ರೆ ಯಶ್ ಅವರ ಮುಂದಿನ ಸಿನಿಮಾದಲ್ಲಿ ಕರಾವಳಿ ಬೆಡಗಿ , ಬುಟ್ಟ ಬೊಮ್ಮ ಖ್ಯಾತಿಯ ಪೂಜಾ ಹೆಗ್ಡೆ ನಾಯಕಿಯಾಗಲಿದ್ಧಾರೆ ಎಂದು ಹೇಳಲಾಗ್ತಿದೆ..
ಯಶ್ ಮುಂದೆ ಪ್ಯಾನ್ ಇಂಡಿಯಾ ಸಿನಿಮಾಗೆ ತಯಾರಿ ನಡೆಸುತ್ತಿದ್ದು ಇದು ಕೂಡ ಬಿಗ್ ಬಜೆಟ್ ಸಿನಿಮಾವಾಗಿರಲಿದೆ.. ಮೂಲಗಳ ಪ್ರಕಾರ ಮಫ್ತಿ ನಿರ್ದೇಶಕ ನರ್ತನ್ ಜೊತೆಗೆ ಯಶ್ ಸಿನಿಮಾ ಮಾಡಲಿದ್ಧಾರೆ ಎನ್ನಲಾಗಿದೆ.. ಇದೇ ಸಿನಿಮಾಗೆ ಪೂಜಾ ನಾಯಕಿ ಎನ್ನಲಾಗ್ತಿದೆ..
ಒಂದು ವೇಳೆ ಈ ಸುದ್ದಿ ನಿಜವೇ ಆದ್ರೆ ಕರ್ನಾಟಕ ಮೂಲದ ಪೂಜಾ ಹೆಗ್ಡೆಯ ಕನ್ನಡದ ಮೊದಲ ಸಿನಿಮಾವಿದಾಗಿರಲಿದೆ.. ಸಾಲು ಸಾಲು ಬರೀ ಸೋಲನ್ನೇ ಕಂಡಿರುವ ಪೂಜಾಗೆ ಆಫರ್ ಗಳೇನೂ ಕಡಿಮೆಯಾಗಿಲ್ಲ.. ಇತ್ತೀಚೆಗೆ ವಿಜಯ್ ದೇವರಕೊಂಡ ಜೊತೆಗೆ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.. ಈಗ ಯಶ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ..