ದಳಪತಿ ವಿಜಯ್ 65ನೇ ಸಿನಿಮಾಗೆ ಪೂಜಾ ಹೆಗ್ಡೆ ಪಡೆದ ಸಂಭಾವನೆ ಕೇಳುದ್ರೇ ಹುಬ್ಬೇರಿಸುತ್ತೀರಾ..!

1 min read

ದಳಪತಿ ವಿಜಯ್ 65ನೇ ಸಿನಿಮಾಗೆ ಪೂಜಾ ಹೆಗ್ಡೆ ಪಡೆದ ಸಂಭಾವನೆ ಕೇಳುದ್ರೇ ಹುಬ್ಬೇರಿಸುತ್ತೀರಾ..!

ದಳಪತಿ ವಿಜಯ್ ಅವರ 65 ಸಿನಿಮಾ ಘೋಷಣೆಯಾಗಿದ್ದು ಆ ಸಿನಿಮಾದಲ್ಲಿ ಇಬ್ಬರು ನಾಯಕಿಯರನ್ನ ಸನ್ ಪಿಕ್ಚರ್ಸ್ ಕಾತ್ರಿಪಡಿಸಿದೆ. ಸಿನಿಮಾದಲ್ಲಿ ಮೇನ್ ಹೀರೋಯಿನ್ ನಮ್ಮ ಕನ್ನಡದ ಚೆಲುವೆ ಪೂಜಾ ಹೆಗ್ಡೆ.. ಪೂಜಾ ಹೆಗ್ಡೆ ಆಗಾಗ ಅತಿ ಹೆಚ್ಚು ಸಂಬಾವನೆಯ ವಿಚಾರದಲ್ಲೇ ಸುದ್ದಿಯಲ್ಲಿರುತ್ತಾರೆ. ಇನ್ ಫ್ಯಾಕ್ಟ್ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯೂ ಹೌದು..

ಅಂದ್ಹಾಗೆ ಪೂಜಾ ಹೆಗ್ಡೆ ದಳಪತಿ ಸಿನಿಮಾದಲ್ಲಿ ನಟಿಸಲು ಪಡೆದ ಸಂಬಾವನೆ ಎಷ್ಟು ಅಂತ ಕೇಳಿ ಸಿನಿಪ್ರೇಕ್ಷಕರು ಹೌಹಾರಿದ್ದಾರೆ. ಈ ಸಿನಿಮಾಗಾಗಿ ಪೂಜಾ ಬರೋಬ್ಬರಿ 3 ಕೋಟಿ ರೂಪಾಯಿಗಳನ್ನ ಪಡೆದಿದ್ದಾರೆಂದು ಊಲಗಳಿಂದ ತಿಳಿದುಬಂದಿದೆ. ಇನ್ನೂ ಪೂಜಾ ಹೆಗ್ಡೆ ತಮ್ಮ ಕೆರಿಯರ್ ಈವರೆಗೂ ಪಡೆದ ಅತಿ ಹೆಚ್ಚು ಸಂಭಾವನೆಯೂ ಕೂಡ ಇದಾಗಿದೆಯಂತೆ.

ರಾಧೆ ಶ್ಯಾಮ್ ಬಿಡುಗಡೆಗೆ ಕಾಯುತ್ತಿರುವ ಪೂಜಾ ಪೂಜಾ ಸದ್ಯ ದಕ್ಷಿಣದಲ್ಲಿ ತೆಲುಗಿನ ರಾಧೆ ಶ್ಯಾಮ್ ರಿಲೀಸ್ ಗೆ ಕಾಯುತ್ತಿದ್ದಾರೆ. ಜೊತೆಗೆ ಸಲ್ಮಾನ್ ಖಾನ್ ಮುಂದಿನ ಸಿನಿಮಾದಲ್ಲಿ ಪೂಜಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

belagavi
ಜಾಹೀರಾತು

ಕಿರಿಕ್ ಪಾರ್ಟಿ ಟೀಮ್ ಗೆ ಕಾನೂನಿನ ಟೆನ್ಷನ್ ಶುರು…! ಆಗಿದ್ದೇನು..?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd