ಪೂಜಾ ಹೆಗ್ಡೆಗೆ ಇತ್ತೀಚೆಗೆ ಸಾಲು ಸಾಲು ಸೋಲುಗಳೇ ಸಿಕ್ಕಿವೆ.. ರಾಧೆ ಶ್ಯಾಮ್ , ಆಚಾರ್ಯ , ಬೀಸ್ಟ್ ಸಿನಿಮಾಗಳು ನಿರೀಕ್ಷೆ ಮಟ್ಟ ತಲುಪದೇ ಫೇಲ್ ಆಗಿದ್ದು ಬುಟ್ಟಬೊಮ್ಮಗೆ ನೆಟ್ಟಿಗರು ಐರನ್ ಲೆಗ್ ಎಂದೂ ಟ್ರೋಲ್ ಮಾಡ್ತಿದ್ದಾರೆ.. ಆದ್ರೂ ಕರಾವಳಿ ಸುಂದರಿ ಪೂಜಾಗೆ ಡಿಮ್ಯಾಂಡ್ ಮಾತ್ರ ಕಡಿಮೆಯಾಗಿಲ್ಲ..
ಹೌದು..!! ಇದೀಗ ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ಅರ್ಜುನ್ ರೆಡ್ಡಿ ಸಿನಿಮಾ ಖ್ಯಾತಿಯ ವಿಜಯ್ ದೇವರಕೊಂಡ ಕಾಂಬಿನೇಶನ್ ನ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
ಜೂನ್ ಮೊದಲ ವಾರದಲ್ಲಿ ಈ ಸಿನಿಮಾದ ಶೂಟಿಂಗ್ ಮುಂಬೈನಲ್ಲಿ ನಡೆಯಲಿದೆ. ಪೂಜಾ ಹೆಗ್ಡೆ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಈ ಸಿನಿಮಾವೂ ಇಂಡಿಯನ್ ಸಿನಿಮಾವಾಗಿರಲಿದೆ..









