Pay CM ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ನಾಯಕರು – ಪೊಲೀಸ್ ವಶಕ್ಕೆ
ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ‘ಪೇಸಿಎಂ’ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ.
ಬಳಿಕ ಅವರನ್ನ ವಶಕ್ಕೆ ಪಡೆಯಲಾಗಿದೆ. ಈ ಸಂದರ್ಭದಲ್ಲಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಹೌದು, ಇದು (‘ಪೇಸಿಎಂ’ ಪೋಸ್ಟರ್ ಪ್ರತಿಭಟನೆ) ರಾಜ್ಯಾದ್ಯಂತ ಮುಂದುವರಿಯುತ್ತದೆ ಎಂದು ಹೇಳಿದರು. ಇದು 40% ಭ್ರಷ್ಟಾಚಾರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಅಭಿಯಾನವಾಗಿದೆ ಎಂದಿದ್ದಾರೆ.
#WATCH | Karnataka: Congress leaders, including party's state chief DK Shivakumar, LoP Siddaramaiah and MP Randeep Singh Surjewala, pasted 'PayCM' posters against CM Basavaraj Bommai in Bengaluru earlier this evening. They were later detained pic.twitter.com/rOaMp2gCeZ
— ANI (@ANI) September 23, 2022
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿ ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಿದರು. ಅವರು ಯಾವುದೇ ಪುರಾವೆ ನೀಡಿಲ್ಲ. ಇದೆಲ್ಲವೂ ರಾಜಕೀಯ ಪ್ರೇರಿತ. ಅದಕ್ಕೆ ಸಾಕ್ಷಿ ನೀಡಲಿ ಎಂದು ಸವಾಲು ಹಾಕಿದ್ದೇನೆ. ಅವರ (ಕಾಂಗ್ರೆಸ್) ಅವಧಿಯಲ್ಲಿ ಹಲವು ಹಗರಣಗಳು ನಡೆದಿದ್ದು, ತನಿಖೆಯಾಗಬೇಕು.