Prabhas
ಇತ್ತೀಚೆಗಷ್ಟೇ ಟಾಲಿವುಡ್ ಸ್ಟಾರ್ ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಹುಟ್ಟುಹಬ್ಬದ ದಿನ , ಅಭಿಮಾನಿಯೋರ್ವ ಫ್ಲೆಕ್ಸ್ ಕಟ್ಟಲು ಹೋಗಿ ವಿದ್ಯುತ್ ತಗುಲಿ ಮೃತಪಟ್ಟ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಈ ಘಟನೆ ಮಾಸುವ ಮುನ್ನವೇ ಇಂದು ಅಂತಹದ್ದೇ ಮತ್ತೊಂದು ದುರ್ಘಟನೆ ಸಂಭವಿಸಿದೆ.
ಹೌದು ಇಂದು ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅವರ ಜನ್ಮದಿನ. ಇಂದು ಅವರ ಬರ್ತ್ ಡೇ ಪ್ರಯುಕ್ತ ಅವರ ಫ್ಲೆಕ್ಸ್ ಕಟ್ಟಲು ಹೋದ ಅಭಿಮಾನಿ ವಿದ್ಯುತ್ ಸ್ಪರ್ಷದಿಂದಾಗಿ ಮೃತಪಟ್ಟಿದ್ದಾರೆ.
ಯಡ್ಡನಪುಡಿ ಮಂಡಲದ ಪೂನೂರು ಗ್ರಾಮದಲ್ಲಿ ಘಟನೆ ಮೊದಲ ಘಟನೆಯು ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಯಡ್ಡನಪುಡಿ ಮಂಡಲದ ಪೂನೂರು ಗ್ರಾಮದಲ್ಲಿ ಕೆಲ ಪ್ರಭಾಸ್ ಅಭಿಮಾನಿಗಳು ಸೇರಿ, ಪ್ರಭಾಸ್‌ಗೆ ಹುಟ್ಟುಹಬ್ಬ ಶುಭಾಶಯದ ಫ್ಲೆಕ್ಸ್‌ಮಾಡಿಸಿ, ಗ್ರಾಮದಲ್ಲಿ ಕಟ್ಟಲು ಯತ್ನಿಸಿದ್ದಾರೆ. ಈ ವೇಳೆ ಫ್ಲೆಕ್ಸ್ ಕಟ್ಟಬೇಕಾದರೆ ಅಭಿಮಾನಿ ಸುಗುಣ್ ರಾವ್‌ಗೆ ವಿದ್ಯುತ್ ಶಾಕ್ ಹೊಡೆದಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗುಇಸಿದರೂ ದುರಾದೃಷ್ಟವಶಾತ್ ಪ್ರಾಣ ಬಿಟ್ಟಿದ್ದಾರೆ.
Prabhas
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel