ಮಹಿಳೆ ಮೇಲೆ ಹಲ್ಲೆ, ಲೈಂಗಿಕ ಕಿರುಕುಳ ಆರೋಪ – ನಟ ಪ್ರಾಚೀನ್ ಚೌಹಾಣ್ ಅರೆಸ್ಟ್
ಮುಂಬೈ: ಇತ್ತೀಚೆಗಷ್ಟೇ ಹಿಂದಿ ಧಾರಾವಾಹಿ ಕ್ಷೇತ್ರದ ಸ್ಟಾರ್ ನಟ ಪರ್ಲ್ ಅಪ್ರಾಪ್ತೆ ಮೇಲೆ ಅತ್ಯಾಚಾರದ ಆರೋಪದಲ್ಲಿ ಜೈಲು ಸೇರಿ ಹಲವು ನಾಟಕೀಯ ಬೆಳವಣಿಗೆಯ ನಂತರ ಜಾಮೀನಿನ ಮೇಲೆ ಹೊರಬಂದಿದ್ದಾರೆ.
ಇದೀಗ ಮತ್ತೊಬ್ಬ ಹಿಂದಿ ಕಿರುತೆರೆ ನಟನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಆತನನ್ನ ಅರೆಸ್ಟ್ ಮಾಡಲಾಗಿದೆ. ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಕಿರುತೆರೆ ನಟ ಪ್ರಚೀನ್ ಚೌಹಾಣ್ ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಪ್ರಾಚೀನ್ ಚೌಹಾಣ್, ಏಕ್ತಾ ಕಪೂರ್ ನಿರ್ಮಾಣದ ಧಾರಾವಾಹಿ ‘ಕಸೌತಿ ಜಿಂದಗಿ ಕ್ಯಾ’ ಸೀರಿಯಲ್ ನಿಂದ ಖ್ಯಾತಿ ಗಳಿಸಿದ್ದಾರೆ. ಇದರಲ್ಲಿ ಅವರು ಸುಬ್ರೋಟೊ ಬಸು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
IPC ಸೆಕ್ಷನ್ 354ರ ಅಡಿಯಲ್ಲಿ ಚೌಹಾನ್ ನ್ನು ಬಂಧಿಸಲಾಗಿದೆ. ಚೌಹಾಣ್ ಮಹಿಳೆಯ ಮೇಲೆ ಹಲ್ಲೆ ಮಾಡಿ ಕಿರುಕುಳ ಮಾಡಿದ್ದಾರೆ ಎನ್ನಲಾಗಿದೆ. ಮಹಿಳೆ ನೀಡಿರುವ ಆರೋಪದ ಮೇಲೆ ನಟನನ್ನ ಬಂಧಿಸಿದ್ದಾರೆ.
KGF 2 ಆಡಿಯೋ ದಾಖಲೆ ಮೊತ್ತಕ್ಕೆ ಸೇಲ್ , ‘ಬಾಹುಬಲಿ’ಯನ್ನೂ ಹಿಂದಿಟ್ಟು ಇತಿಹಾಸ ಸೃಷ್ಟಿಸಿದ ‘ರಾಖಿ ಭಾಯ್’ ..!
ಮದುವೆಯಾಗಿ 15 ವರ್ಷಗಳ ನಂತರ ವಿಚ್ಛೇದನಕ್ಕೆ ಮುಂದಾದ ಅಮಿರ್ ಖಾನ್ ದಂಪತಿ