KGF 2 ಆಡಿಯೋ ದಾಖಲೆ ಮೊತ್ತಕ್ಕೆ ಸೇಲ್ , ‘ಬಾಹುಬಲಿ’ಯನ್ನೂ ಹಿಂದಿಟ್ಟು ಇತಿಹಾಸ ಸೃಷ್ಟಿಸಿದ ‘ರಾಖಿ ಭಾಯ್’ ..!
ಭಾರತೀಯ ಸಿನಿಮಾರಂಗವೇ ಜಾಕತ ಪಕ್ಷಿಯಂತೆ ಕಾಯುತ್ತಿರುವ KGF ಚಾಪ್ಟರ್ 2 ಟೀಸರ್ ವಿಚಾರದಲ್ಲೂ, ಬಹುನಿರೀಕ್ಷಿತ ಸಿನಿಮಾಗಳ ವಿಚಾರದಲ್ಲೂ ಎಲ್ಲದ್ರೂ ನಂಬರ್ ಸ್ಥಾನದಲ್ಲಿದೆ.. ವಿಶ್ವ ದಾಖಲೆಗಳ ಮೇಲೆ ದಾಖಲೆಗಳನ್ನ ಮಾಡಿದೆ..
ಎಲ್ಲಿ ನೋಡಿದ್ರೂ ರಾಖಿ ಭಾಯ್ ದೇ ಹವಾ… ಬಾಹುಬಲಿ ಅಂತ ಬಾಹುಬಲಿ ಸಿನಿಮಾವನ್ನೂ ಹಿಂದಿಟ್ಟು ಇದೀಗ ಮತ್ತೊಂದು ಹೊಸ ದಾಖಲೆ ಮಾಡಿದೆ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನ KGF ಚಾಪ್ಟರ್ ಸಿನಿಮಾ.
ಹೌದು.. KGF ಮೊದಲ ಅಧ್ಯಾಯದ ಆಡಿಯೋ ಹಕ್ಕು ಖರೀದಿ ಮಾಡಿದ್ದ ಪ್ರತಿಷ್ಟಿತ ಲಹರಿ ಆಡಿಯೋ ಸಂಸ್ಥೆ ‘ಕೆಜಿಎಫ್ 2’ ಸಿನಿಮಾದ ಆಡಿಯೋ ಹಕ್ಕುಗಳನ್ನ ಖರೀದಿಸಿದೆ. ಕೆಜಿಎಫ್ 2 ಸಿನಿಮಾ 5 ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದ್ದು ಐದೂ ಭಾಷೆಗಳ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆಯೇ ಖರೀದಿಸಿದೆ.
ಕೆಜಿಎಫ್ 2 ಆಡಿಯೋ ಹಕ್ಕುಗಳನ್ನು ಖರೀದಿಸಿದ ಬಳಿಕ ಈ ವ್ಯವಾಹರದ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಲಹರಿ ವೇಲು, ಆಡಿಯೋ ಹಕ್ಕುಗಳನ್ನು ಯಾವ ಬೆಲೆಗೆ ಖರಿದಿಸಲಾಗಿದೆ, ಸಿನಿಮಾದಲ್ಲಿ ಎಷ್ಟು ಹಾಡುಗಳಿವೆ? ಆಡಿಯೋ ಲಾಂಚ್ ಕಾರ್ಯಕ್ರಮ ಯಾವಾಗ ಎಂಬ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಅಂದ್ಹಾಗೆ 2018 ರಲ್ಲಿ ಕೆಜಿಎಫ್ ಚಾಪ್ಟರ್ 1ರ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆಯು 3.60 ಕೋಟಿ ರುಪಾಯಿ ಹಣ ನೀಡಿ ಖರೀದಿಸಿತ್ತು. ಇದೀಗ ಕೆಜಿಎಫ್ 2ರ ಆಡಿಯೋ ಹಕ್ಕನ್ನು ಬರೋಬ್ಬರಿ 7.20 ಕೋಟಿ ರು. ಹಣ ನೀಡಿ ಖರೀದಿಸಿದ್ದಾರೆ. ಎಲ್ಲ ಐದೂ ಭಾಷೆಯ ಆಡಿಯೋ ಹಕ್ಕುಗಳು ಲಹರಿ ಸಂಸ್ಥೆಗೇ ಸೇರಿವೆ.
ಭಾರತದ ಸಿನಿಮಾರಂಗದಲ್ಲಿ ಹೊಸ ಮೈಲುಗಲ್ಲು ಸೃಷ್ಟಿ ಮಾಡಿದ್ದ ರಾಜಮೌಳಿಯ ಬಾಹುಬಲಿಯನ್ನೂ ಈ ವಿಚಾರದಲ್ಲಿ KGF 2 ಹಿಂದಿಟ್ಟಿದ್ದು, ಹಿಂದಿನ ರೆಕಾರ್ಡ್ ಗಳನ್ನ ಚೂರ್ ಚೂರ್ ಮಾಡಿದೆ.. ಬಾಹುಬಲಿ 1ನ ಆಡಿಯೋ ಹಕ್ಕಿಗೆ ನಾವು 3.5 ಕೋಟಿ ನೀಡಿದ್ದು, ಬಾಹುಬಲಿ 2ಗೆ 5.40 ಕೋಟಿ ಹಣ ನೀಡಲಾಗಿತ್ತು. ಆದರೆ ಕೆಜಿಎಫ್ 2 ಸಿನಿಮಾಕ್ಕೆ ಅತಿ ಹೆಚ್ಚು ರಾಯಧನವನ್ನು ನೀಡಲಾಗಿದೆ.
ಇನ್ನೂ ಕೆಜಿಎಫ್ 2 ನಲ್ಲಿ ಒಟ್ಟು ಎಷ್ಟು ಹಾಡುಗಳಿವೆ ಅನ್ನೋ ವಿಚಾರ ನೊಡೋದಾದ್ರೆ ಸಿನಿಮಾದಲ್ಲಿ ಒಟ್ಟು ಐದು ಹಾಡುಗಳಿವೆ ಮತ್ತು ಎರಡು ಬಿಟ್‌ಗಳಿವೆ ಎಂದು ಲಹರಿ ವೇಲು ಮಾಹಿತಿ ನೀಡಿದ್ದಾರೆ..
ಅಲ್ದೇ ಕೆಜಿಎಫ್ ಚಾಪ್ಟರ್ 1 ರ ಎಲ್ಲಾ ಸಾಂಗ್ ಗಳು ಸೂಪರ್ ಹಿಟ್ ಆಗಿದ್ದವು.. ಈ ಈ ಅಧ್ಯಾಯದ ಹಾಡುಗಳು ಅಧ್ಯಾಯ 1ಕ್ಕಿಂತಲೂ ಚೆನ್ನಾಗಿವೆ. ರವಿ ಬಸ್ರೂರು ಅದ್ಭುತವಾಗಿ ಹಾಡುಗಳನ್ನು ಸಂಯೋಜಿಸಿದ್ದಾರೆ. ಹಾಡುಗಳ ಚಿತ್ರೀಕರಣ ಸಹ ಅದ್ಧೂರಿಯಾಗಿ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನೂ ಮುಂದಿನ ತಿಂಗಳು ಆಡಿಯೋ ಲಾಂಚ್ ಮಾಡುವ ಸಾಧ್ಯತೆ ಇದೆ.. ಒಂದೊಂದೆ ಸಾಂಗ್ ರಿಲೀಸ್ ಆಗಲಿದ್ದು, ಇನ್ಮುಂದೆ ಪ್ರಮೋಟ್ ಕೆಲಸವನ್ನೂ ಕೂಡ ಲಹರಿ ಸಂಸ್ಥೆ ಆರಂಭಿಸಲಿದೆ..
ಅದ್ಧೂರಿ ಕಾರ್ಯಕ್ರಮ ಆಯೋಜನೆ ಆಗಲಿದೆ. ಇಲ್ಲವಾದರೆ ಆನ್‌ಲೈನ್ ಅಥವಾ ನಿಗದಿತ ಜನರ ಮುಂದೆ ಕಾರ್ಯಕ್ರಮ ನಡೆಯಲಿದೆ ಎಂದು ಲಹರಿ ವೇಲು ತಿಳಿಸಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ರೆ ಸಿನಿಮಾ ಇಷ್ಟೊತ್ತಿಗಾಗಲೇ ರಿಲೀಸ್ ಆಗಿ ಬಹಳ ದಿನಗಳೇ ಆಗಿರಬೇಕಿತ್ತು.. ಕೋವಿಡ್ ಅಲೆಯಿಂದಾಗಿ ಜುಲೈ 16ಕ್ಕೆ ರಿಲೀಸ್ ಡೇಟ್ ಘೋಷಣೆಯಾಗಿತ್ತು. ಆದ್ರೆ ಕೋವಿಡ್ 2ನೇ ಅಲೆಯಿಂದ ಮತ್ತೆ ತಡವಾಗ್ತಿದೆ..