ಪತಿ ಜೊತೆ ಬೇಬಿ ಬಂಪ್ ಪೋಟೋಶೂಟ್ ನಲ್ಲಿ ಕಾಣಿಸಿಕೊಂಡ ಪ್ರಣಿತಾ
ಸ್ಯಾಂಡಲ್ ವುಡ್ ನ ಖ್ಯಾತ ನಟಿ ಪ್ರಣಿತಾ ಸುಭಾಷ್ ತಾಯಿಯಾಗುತ್ತಿರುವ ವಿಚಾರ ನಿಮಗೆಲ್ಲ ಗೊತ್ತಿರುವ ಸಂಗತಿ. ಇತ್ತೀಚಿಗಷ್ಟೆ ಸೀಮಂತ ಶಾಸ್ತ್ರದ ಪೋಟೋಗಳನ್ನ ಹಂಚಿಕೊಂಡಿದ್ದರು. ಇದೀಗ ನಟಿ ಪತಿ ಜೊತೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡು ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಬೇಬಿ ಬಂಪ್ ಪೊಟೋಗಳನ್ನ ನಟಿ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಟಿ ಪ್ರಣೀತಾ ಸುಭಾಷ್ 2021ರ ಮೇ 30 ರಂದು ಅತ್ಯಾಪ್ತರ ಸಮ್ಮುಖದಲ್ಲಿ ಉದ್ಯಮಿ ನಿತಿನ್ ರಾಜು ಅವರೊಂದಿಗೆ ಹಸೆಮಣೆ ಏರಿದ್ದರು.
2010 ರಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪ್ರಣಿತ ದರ್ಶನ್ ಅಭಿನಯದ ಪೊರ್ಕಿ ಚಿತ್ರದಿಂದ ಕನ್ನಡ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದರು. ಕನ್ನಡ ಸೇರಿದಂತೆ ತಮಿಳು ತೆಲುಗು ಹಿಂದಿ ಭಾಷೆಗಳಲ್ಲೂ ಪ್ರಣಿತಾ ಆಭಿನಯಿಸಿದ್ದಾರೆ.