ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಹೆಚ್ಚಿನ ಫಾಲೋವರ್ಸ್ ಗಳನ್ನು ಹೊಂದಿದ್ದು, ಟಾಪ್ 10 ಜನರಲ್ಲಿ ಸ್ಥಾನ ಪಡೆದಿದ್ದಾರೆ.
ಅಲ್ಲದೇ, ಟ್ವಿಟರ್ನಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿರುವ ಭಾರತೀಯ ಎಂಬ ಹೆಗ್ಗಳಿಕೆಗೂ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ. ಪ್ರಧಾನಿ ಮೋದಿ ತಮ್ಮ ವೈಯಕ್ತಿಕ ಖಾತೆಯಲ್ಲಿ ಸದ್ಯ 90 ಮಿಲಿಯನ್ ಅಂದರೆ 9 ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಈ ಮೂಲಕ ಟ್ವಿಟರ್ ನ ಅತ್ಯಧಿಕ ಫಾಲೋವರ್ಸ್ ಹೊಂದಿರುವ ಖಾತೆಗಳ ಟಾಪ್-10ರ ಪಟ್ಟಿಯಲ್ಲಿಯೂ ಸ್ಥಾನ ಪಡೆದಿದ್ದಾರೆ.
ಟ್ವಿಟರ್ನ ಟಾಪ್-10 ಅತ್ಯಧಿಕ ಫಾಲೋವರ್ಸ್ ಪಟ್ಟಿಯಲ್ಲಿ ಮೋದಿ ಎಂಟನೇ ಸ್ಥಾನದಲ್ಲಿದ್ದು, ಟಾಪ್-10 ಪಟ್ಟಿಯಲ್ಲಿರುವ ಏಕೈಕ ಭಾರತೀಯ ಎಂದೆನಿಸಿಕೊಂಡಿದ್ದಾರೆ. ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್(14.7 ಕೋಟಿ ಫಾಲೋವರ್ಸ್) ಅಗ್ರಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಬರಾಕ್ ಒಬಾಮ (13.2 ಕೋಟಿ ಫಾಲೋವರ್ಸ್) ಇದ್ದಾರೆ.