ಪ್ರಧಾನಿ ಮೋದಿ ಪ್ರಯಾಣಕ್ಕೆ ಬರಲಿದೆ ಬೋಯಿಂಗ್ 777-300ER ವಿಮಾನ
ಹೊಸದಿಲ್ಲಿ, ಅಗಸ್ಟ್17: ಭಾರತಕ್ಕೆ ಬರಲು ಬೋಯಿಂಗ್ 777-300ER ಸಜ್ಜಾಗಿದೆ. ಕಳೆದ 25 ವರ್ಷಗಳಿಂದ ವಿವಿಐಪಿ ಕರ್ತವ್ಯದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ 747-400 ನ ಬದಲಾಗಿ ಬೋಯಿಂಗ್ 777-300ER ಸೇವೆ ಸಲ್ಲಿಸಲಿದೆ.
ರಾಷ್ಟ್ರಪತಿ ರಾಮ್ನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಇಲ್ಲಿಯವರೆಗೆ ಬೋಯಿಂಗ್ 747 ಬಳಸುತ್ತಿದ್ದು, ಇದೀಗ ಹೊಸ ವಿವಿಐಪಿ ಸಾರಿಗೆಯಾಗಿ ಕಾರ್ಯನಿರ್ವಹಿಸಲು ಎರಡು ಬೋಯಿಂಗ್ 777-300ಇಆರ್ ಗಳನ್ನು ಸ್ವೀಕರಿಸಲು ದೇಶವು ಸಜ್ಜಾಗಿದೆ.

ಬೋಯಿಂಗ್ 777 ವಿಮಾನ ದೀರ್ಘ ಪ್ರಯಾಣಕ್ಕೆ ಸೂಕ್ತವಾಗಿದ್ದು, ರಾಷ್ಟ್ರಪತಿಗಳು, ಉಪ ರಾಷ್ಟ್ರಪತಿಗಳು ಅಥವಾ ಪ್ರಧಾನ ಮಂತ್ರಿಗಳು ಇದರಲ್ಲಿರುವ ಸುಧಾರಿತ ಕಮ್ಯುನಿಕೇಷನ್ ಫೆಸಿಲಿಟಿಯಿಂದ, ಯಾವುದೇ ವಿಮಾನಕ್ಕೆ ಕರೆ ಮಾಡಬಹುದಾಗಿದೆ ಅಥವಾ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಹನ ನಡೆಸಬಹುದಾಗಿದೆ. ಹೊಸ ಬೋಯಿಂಗ್ 777 ವಿಮಾನಗಳು ಸುಧಾರಿತ ರಕ್ಷಣಾ ವ್ಯವಸ್ಥೆಗಳೊಂದಿಗೆ ಅಳವಡಿಸಲ್ಪಟ್ಟಿವೆ.
ಬೋಯಿಂಗ್ 777 ಗಳನ್ನು ಸಂಪೂರ್ಣವಾಗಿ ಐಎಎಫ್ ನಿರ್ವಹಿಸಲಿರುವುದರಿಂದ, ಬೋಯಿಂಗ್ 747 ಅನ್ನು ಮಾರಾಟ ಮಾಡುವ ಸಾಧ್ಯತೆಯಿದೆ ಎಂದು ಊಹಾಪೋಹಗಳು ಹರಡಿದ್ದರೂ, ಸರ್ಕಾರ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ಈ ಎಲ್ಲಾ ವರ್ಷಗಳಲ್ಲಿ ನಾಲ್ಕು 747-400 ವಿಮಾನಗಳು ಏರ್ ಇಂಡಿಯಾ ಒಡೆತನದಲ್ಲಿದೆ ಮತ್ತು ಕಾರ್ಯ ನಿರ್ವಹಿಸುತ್ತಿವೆ. ಇದು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ದೀರ್ಘ ಪ್ರಯಾಣಕ್ಕೆ ಸೂಕ್ತವಾಗಿರಲಿಲ್ಲ. ಬೋಯಿಂಗ್-777 ನ ಎರಡು ವಿಮಾನಗಳನ್ನು 2018 ರಲ್ಲಿ ವಿತರಿಸಲಾಗಿತ್ತು ಆದರೆ ನವೀಕರಣ ಮತ್ತು ರಿಟ್ರೊಫಿಟಿಂಗ್ ಕೆಲಸವನ್ನು ಕೈಗೊಳ್ಳಲು ಬೋಯಿಂಗ್‌ಗೆ ಹಿಂತಿರುಗಿಸಲಾಯಿತು.
ಬೋಯಿಂಗ್ 777 ಅನ್ನು ವಿಐಪಿ ಸಾರಿಗೆಯಾಗಿ ಬಳಸುವುದು ಹೊಸತಲ್ಲ. ಜಪಾನ್, ಬಾಂಗ್ಲಾದೇಶ ಮತ್ತು ಸೌದಿ ಅರೇಬಿಯಾಗಳಲ್ಲಿ ಈ ವಿಮಾನವನ್ನು ಇದೇ ರೀತಿಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

ಏರ್ ಇಂಡಿಯಾ ಒನ್ 777 ನ ವೈಶಿಷ್ಟ್ಯಗಳು
ವಿಮಾನದ ಸುಧಾರಿತ ರಕ್ಷಣಾ ವ್ಯವಸ್ಥೆಗಳ ಜೊತೆಗೆ ಭಾರತೀಯ ವಾಯುಪಡೆಯ ಪೈಲಟ್‌ಗಳಿಗೆ ಈ ವಿಮಾನ ಹಾರಾಟದ ತರಬೇತಿ ನೀಡಲಾಗುತ್ತಿದೆ . ಸಾಂಪ್ರದಾಯಿಕವಾಗಿ, ಏರ್ ಇಂಡಿಯಾ ಪೈಲಟ್‌ಗಳು ಏರ್ ಇಂಡಿಯಾ ಒನ್ ವಿಮಾನಗಳನ್ನು ಹಾರಿಸುತ್ತಿದ್ದಾರೆ. ಡಲ್ಲಾಸ್ (ಯುಎಸ್ಎ) ಯಲ್ಲಿರುವ ಬೋಯಿಂಗ್ ಸೌಲಭ್ಯದಲ್ಲಿ ತಯಾರಾದ ವಿಮಾನಗಳು ಸುಧಾರಿತ ಮಿಲಿಟರಿ ರಕ್ಷಣಾ ವ್ಯವಸ್ಥೆಗಳು ಮತ್ತು ಪುನರ್ರಚಿಸಿದ ಕ್ಯಾಬಿನ್‌ನೊಂದಿಗೆ ಮರುಹೊಂದಿಸಲ್ಪಟ್ಟಿವೆ. ವಿಮಾನವು -300ER ಗಾಗಿ ತಯಾರಿಸಿದ ಎಂಜಿನ್‌ನ ರೂಪಾಂತರವಾದ ಅವಳಿ ಜಿಇ 90-115 ಎಂಜಿನ್‌ಗಳನ್ನು ಹೊಂದಿರುತ್ತದೆ. ಇದು 900 ಕಿ.ಮೀ ವೇಗದಲ್ಲಿ ಹಾರಬಲ್ಲದು. ಅವುಗಳಲ್ಲಿ ರಾಷ್ಟ್ರಪತಿ, ಪ್ರಧಾನಿ, ಉಪರಾಷ್ಟ್ರಪತಿ ಸುರಕ್ಷತೆಗಾಗಿ, ಆ ವಿಮಾನಗಳಲ್ಲಿ ಅತ್ಯಾಧುನಿಕ ಮಿಲಿಟರಿ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ವಿಮಾನದಲ್ಲಿ ಕಾನ್ಫರೆನ್ಸ್ ರೂಮ್, ಲಿವಿಂಗ್ ರೂಮ್, ಆಫೀಸ್ ವ್ಯವಸ್ಥೆ ಜೊತೆಗೆ ಮೆಡಿಕಲ್ ಎಮರ್ಜೆನ್ಸಿಗಾಗಿ ಮೆಡಿಕಲ್ ಸೂಟ್ ಕೂಡ ಲಭ್ಯವಿದೆ.
ವಿಮಾನದಲ್ಲಿರುವ ಅತಿಗೆಂಪು ಕೌಂಟರ್‌ಮೆಶರ್ಸ್ (LAIRCM) ಮತ್ತು ಸ್ವ-ಸಂರಕ್ಷಣಾ ಸೂಟ್‌ಗಳು (ಎಸ್‌ಪಿಎಸ್) ವಿಮಾನವನ್ನು ದುರದೃಷ್ಟಕರ ಘಟನೆಯ ಸಂದರ್ಭದಲ್ಲಿ ಹಾನಿಗೊಳಗಾಗದಂತೆ ರಕ್ಷಿಸುತ್ತದೆ. ಇದಕ್ಕಾಗಿ 190 ಮಿಲಿಯನ್ ಡಾಲರ್ ಅನ್ನು ವೆಚ್ಚಮಾಡಲಾಗಿದೆ ಮತ್ತು ಮಿಲಿಟರಿ ಸ್ವರೂಪದಿಂದಾಗಿ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಅನುಮೋದನೆ ಪಡೆದ ನಂತರವೇ ಕಸ್ಟಮೈಸ್ ಮಾಡಲಾಗಿದೆ. ವಿಮಾನಗಳು ಸುಧಾರಿತ ಎಲೆಕ್ಟ್ರಾನಿಕ್ ವಾರ್ಫೇರ್ ಸೂಟ್‌ಗಳನ್ನು ಒಳಗೊಂಡಿರುತ್ತವೆ. ಈ ವೈಶಿಷ್ಟ್ಯವು ವಿಮಾನವನ್ನು ದಾಳಿಯಿಂದ ತಪ್ಪಿಸಲು ಮಾತ್ರವಲ್ಲದೆ ದಾಳಿಯ ಸಂದರ್ಭದಲ್ಲಿ ಪ್ರತಿರೋಧಿಸಲು ಸಹ ಶಕ್ತವಾಗಿದೆ.

ಅಮೆರಿಕಾದ ರಾಷ್ಟ್ರಾಧ್ಯಕ್ಷರು ಕೂಡ ಏರ್ ಫೋರ್ಸ್ ಒನ್ ವಿಮಾನವನ್ನು ಬಳಸುತ್ತಿದ್ದಾರೆ. ಅದು ಬೋಯಿಂಗ್ 747-200ಬಿ ಸರಣಿಯ ವಿಮಾನವಾಗಿದ್ದು ಈ ವಿಮಾನಕ್ಕೆ ಗಾಳಿಯಲ್ಲಿಯೂ ಕೂಡ ಇಂಧನ ಫಿಲ್ ಮಾಡ್ಬೋದಾಗಿದೆ.
ರಷ್ಯಾದ ರಾಷ್ಟ್ರಾಧ್ಯಕ್ಷರು ಅತ್ಯಾಧುನಿಕ ಸೌಲಭ್ಯಗಳಿರುವ ಐಎಲ್ಪಿ-96-300 ಪಿಯು ಜೆಟ್ ಅನ್ನು ಬಳಸುತ್ತಿದ್ದಾರೆ. ದಾಳಿಯ ಸಂದರ್ಭದಲ್ಲಿ ಇದು ಸೈನಿಕರಿಗೆ ಆದೇಶವನ್ನು ನೀಡುವ ಸಾಮರ್ಥ್ಯವನ್ನು ಕೂಡ ಹೊಂದಿದೆ. ಅಷ್ಟೇ ಅಲ್ಲ ಇದರಲ್ಲಿ ಆಫೀಸ್, ಬೆಡ್ ರೂಮ್, ಜಿಮ್ ಸೌಲಭ್ಯ ಕೂಡ ಇದೆ.
ಚೀನಾ ರಾಷ್ಟ್ರಪತಿ ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ಬೋಯಿಂಗ್ 747-400 ಸರಣಿಯ ವಿಮಾನವನ್ನು ಬಳಸುತ್ತಿದ್ದು, ಇದರಲ್ಲಿ ಲಿವಿಂಗ್ ರೂಮ್, ಬೆಡ್ ರೂಮ್ ಹಾಗೂ ಆಫೀಸ್ ವ್ಯವಸ್ಥೆ ಇದೆ.








