ಫೆಬ್ರವರಿ 14 ಪ್ರೇಮಿಗಳ ದಿನದಂದು ಪ್ರೀತಿಯ ಬಲೆಗೆ ಬೀಳುವುದಿಲ್ಲ ಮತ್ತು ಪ್ರೇಮ ವಿವಾಹವಾಗುವುದಿಲ್ಲ ಎಂದು ವಿದ್ಯಾರ್ಥಿನಿಯರಿಂದ ಪ್ರತಿಜ್ಞೆ ಸ್ವೀಕರಿಸಿದ ಮಹಾರಾಷ್ಟ್ರದ ಕಾಲೇಜೊಂದರ ಪ್ರಾಂಶುಪಾಲ ಮತ್ತು ಪ್ರಾಧ್ಯಾಪಕರನ್ನು ಅಮಾನತುಗೊಳಿಸಲಾಗಿದೆ.
ಮಹಾರಾಷ್ಟ್ರದ ಅಮರಾವತಿ ಮಹಿಳಾ ಕಲಾ-ವಾಣಿಜ್ಯ ವಿದ್ಯಾಲಯದಲ್ಲಿ ಪ್ರೇಮಿಗಳ ದಿನದಂದು ವಿದ್ಯಾರ್ಥಿನಿಯರಿಗೆ, ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರು ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಶಿಬಿರದಲ್ಲಿ ನಾವು ಯಾವುದೇ ಕಾರಣಕ್ಕೂ ಪ್ರೇಮದ ಬಲೆಯಲ್ಲಿ ಬೀಳುವುದಿಲ್ಲ ಅಥವಾ ಪ್ರೇಮ ವಿವಾಹ ಆಗುವುದಿಲ್ಲವೆಂದು ಪ್ರತಿಜ್ಞಾ ವಿಧಿಯನ್ನು ಬೋಧಿಸಿದ್ದರು.
ನಂತರ ಈ ವಿಚಾರ ವೈರಲ್ ಆಗಿ, ಬಹಳಷ್ಟು ಮಹಿಳೆಯರು ತಮ್ಮ ಆಕ್ರೋಶ ಹೊರಹಾಕಿದ್ದರು. ಪ್ರತಿಜ್ಞಾ ವಿಧಿಗಾಗಿ ಪ್ರಾಂಶುಪಾಲರು ಯಾವುದೇ ಲಿಖಿತ ರೂಪದ ಅನುಮತಿಯನ್ನು ಪಡೆದಿರಲಿಲ್ಲ. ಈ ರೀತಿಯ ಅಸಂವಿಧಾನಿಕ ನಡವಳಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಿತಿನ್ ಧಂಡೆ ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ವಿದರ್ಭ ಯುವ ಕಲ್ಯಾಣ ಸಮಾಜ, ತನಿಖೆಗೆ ಏಕಸದಸ್ಯ ಸಮಿತಿಯನ್ನು ರಚಿಸಿತ್ತು. ಏಕಸದಸ್ಯ ಸಮಿತಿ ತನಿಖೆ ನಡೆಸಿ ವರದಿ ಸಲ್ಲಿಸಿದ್ದು, ಪ್ರಾಂಶುಪಾಲ ರಾಜೇಂದ್ರ ಹವಾರೆ, ಪ್ರದೀಪ್ ದಂಡೆ ಮತ್ತು ಎನ್ಎಸ್ಎಸ್ ಪ್ರೋಗ್ರಾಮ್ ಆಫೀಸರ್ ವಿ.ಡಿ. ಕಪಾಸೆಯನ್ನು ಅಮಾನತುಗೊಳಿಸಿ ಫೆಬ್ರವರಿ.27ರಂದು ಆದೇಶ ಹೊರಡಿಸಿರುವುದಾಗಿ ವಿದರ್ಭ ಯುವ ಕಲ್ಯಾಣ ಸಮಾಜದ ಕಾರ್ಯದರ್ಶಿ ಯುವರಾಜ್ ಸಿಂಗ್ ಚೌಧರಿ ತಿಳಿಸಿದ್ದಾರೆ.
ಸಾಂತಾಕ್ಲಾಸ್ ಆಗಿ ಕಾಣಿಸಿಕೊಂಡ ಸುನಿತಾ ವಿಲಿಯಮ್ಸ್
ವಾಷಿಂಗ್ಟನ್: ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್ (Sunita Williams) ಸಾಂತಾಕ್ಲಾಸ್ ಆಗಿ ಫೋಟೋಗೆ ಫೋಸ್ ನೀಡಿದ್ದಾರೆ. ಆರು ತಿಂಗಳಿಂದ ಬಾಹ್ಯಾಕಾಶದಲ್ಲಿರುವ ಸುನಿತಾ ವಿಲಿಯಮ್ಸ್ ಕ್ರಿಸ್ಮಸ್ ಸಂಭ್ರಮದಲ್ಲಿದ್ದಾರೆ. ಸುನಿತಾ ಅವರು...