ದಳಪತಿ ವಿಜಯ್ ರಿಂದ ಕಲಿತ ಪಾಠದ ಬಗ್ಗೆ ತಿಳಿಸಿದ ಪ್ರಿಯಾಂಕಾ ಚೋಪ್ರಾ..!

1 min read

ದಳಪತಿ ವಿಜಯ್ ರಿಂದ ಕಲಿತ ಪಾಠದ ಬಗ್ಗೆ ತಿಳಿಸಿದ ಪ್ರಿಯಾಂಕಾ ಚೋಪ್ರಾ..!

ತಮಿಳಿನ ಸೂಪರ್ ಸ್ಟಾರ್ ದಳಪತಿ ವಿಜಯ 65 ಸಿನಿಮಾಗಳನ್ನ ಮುಗಿಸಿ 66ನೇ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ.. ಅವರ 65ನೇ ಸಿನಿಮಾ BEAST’ ರಿಲೀಸ್ ಗೆ ರೆಡಿಯಾಗಿದೆ… ಮತ್ತೊಂದೆಡೆ ಪ್ರಿಯಾಂಕಾ ಚೋಪ್ರಾ ಪ್ರಸ್ತುತ ಹಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಬ್ಯುಸಿಯಾಗಿರುವ , ಬಾಲಿವುಡ್ ನ ಸ್ಟಾರ್ ನಟಿ.. ಮಾಜಿ ವಿಶ್ವ ಸುಂದರಿ ಪ್ರಯಾಂಕಾ ಪ್ರಸ್ತುತ ಪತಿ ನಿಕ್ ಜಾನಸ್ ಜೊತೆಗೆ ಅಮೆರಿಕಾದಲ್ಲಿ ಸೆಟಲ್ ಆಗಿದ್ದಾರೆ.. ಆದ್ರೆ ವಿಶ್ವ ಸುಂದರಿ ಪಟ್ಟ ಗೆದ್ದ ನಂತರ ಸಿನಿಮಾ ಜಗತ್ತಿಗೆ ಪಿಗ್ಗಿ ಪರಿಚಯವಾಗಿದ್ದ ತಮಿಳಿನ ತಮಿಝನ್ ಸಿನಿಮಾ ಮೂಲಕ.. ಈ ಸಿನಿಮಾದಲ್ಲಿ ಪ್ರಿಯಾಂಕಾ ನಾಯಕಿಯಾಗಿದ್ರೆ ದಳಪತಿ ವಿಜಯ್ ನಾಯಕನಾಗಿದ್ದರು. ಈ ಸಿನಿಮಾ 2000 ರ ಸಮಯದಲ್ಲಿ ರಿಲೀಸ್ ಆಗಿತ್ತು..

ಅಷ್ಟಕ್ಕೂ ಈಗ ಈ ಸಿನಿಮಾ , ಪ್ರಿಯಾಂಕಾ ಚೋಪ್ರಾಹಾಗೂ ವಿಜಯ್ ರನ್ನ ನೆನಯುತ್ತಿರುವುದಕ್ಕೆ  ಮಾತನಾಡುತ್ತಿರುವುದಕ್ಕೆ ಕಾರಣವಿದೆ… ತಾವೆಷ್ಟೇ ಎತ್ತರಕ್ಕೆ ಬೆಳೆದ್ರು ತಮ್ಮನ್ನ ಬೆಳೆಸಿದವರನ್ನ ಬೆಳೆಸಿದ ರಾಜ್ಯ ಭಾಷೆಯನ್ನ ಮರೆತಿರುವ ನಟ ನಟಿಯರನ್ನ ನಾವು ನೋಡಿದ್ದೇವೆ.. ಬೆಸ್ಟ್ ಎಕ್ಸಾಂಪಲ್ ಅಂದ್ರೆ ಕಿರಿಕ್ ರಾಣಿ ರಶ್ಮಿಕಾ.. ಆದ್ರೆ ಪ್ರಸ್ತುತ ಯಶಸ್ಸಿನ ಪೀಕ್ ರೀಚ್ ಆಗಿರೋ ಪ್ರಿಯಾಂಕಾ ಹಾಲಿವುಡ್ ನಲ್ಲಿ ಮಿಂಚುತಿದ್ದು , ಅವರು ದಳಪತಿ ವಿಜಯ್ ಬಗ್ಗೆ ಮಾತನಾಡಿ ಅವರಿಂದ ಕಲಿತ ಪಾಠಗಳ ಬಗ್ಗೆ ತಿಳಿಸಿದ್ದಾಋಎ.. ಪಿಗ್ಗಿ ಕೆಲವು ಬಾರಿ ವಿಜಯ್ ತಮ್ಮ ಫೇವರೇಟ್ ನಟ ಎಂದು ಹೇಳಿಕೊಂಡಿದ್ದಾರೆ.

ಅಂತೆಯೇ  ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಪಿಗ್ಗಿ 2000ರಲ್ಲಿ ನಾನು Miss World Awards ಗೆದ್ದ ನಂತರ ಸಿನಿಮಾಕ್ಕೆ ನಾನು ಇನ್ನೂ ಹೊಸಬಳಾಗಿದ್ದೆ. ಮೊದಲಿಗೆ ನಾನು ತಮಿಝನ್ ಎಂಬ ತಮಿಳು ಚಿತ್ರ ಹಾಗೂ ಅಂದಾಜ್ ಮತ್ತು ದಿ ಹೀರೋ ಎಂಬ ಎರಡು ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿದೆ. ನನಗೆ ಈಗಲೂ ನೆನಪಿದೆ ಸೆಟ್ ಗೆ ಹೋದಾಗ ನನಗೆ ಏನು ಸಹ ತಿಳಿದಿರಲಿಲ್ಲ. ನಟನೆ ಎಂಬುದು ನಿಜವಾಗಿಯೂ ನೀವು ಧರಿಸುವ ಡ್ರೆಸ್ ಹಾಗೂ ಮೇಕಪ್ ಗೆ  ಸಂಬಂಧಿಸುತ್ತದೆ. ನಾನು ಸೆಟ್ಗೆ ಹೋದಾಗ ಕಾಗದದ ಮೇಲೆ ನೀಡಿರುವ ಡೈಲಾಂಗ್ ತೆಗೆದುಕೊಂಡು ಪಾತ್ರಕ್ಕೆ ಜೀವ ತುಂಬಿಸುವುದು ಹೇಗೆ ಎಂದು ಯೋಚಿಸುತ್ತಿದೆ. ಈ ಅನುಭವ ಬಹಳ ಕಷ್ಟಕರವಾಗಿತ್ತು.

ನಾನು ಡೈಲಾಂಗ್ ಫೋನೆಟಿಕ್ ಆಗಿ ಕಲಿಯುತ್ತಿದ್ದೆ. ನಂತರ ಅದನ್ನು ಕಂಠಪಾಠ ಮಾಡುತ್ತಿದ್ದೆ. ಅದರ ಹಿಂದಿನ ಅರ್ಥವನ್ನು ಅರ್ಥಮಾಡಿಕೊಳ್ಳುತ್ತಿದ್ದೆ ಮತ್ತು ನಂತರ ನನ್ನ ಸಾಲುಗಳನ್ನು ಹೇಳುತ್ತಿದ್ದೆ. ಈ ವೇಳೆ ನನ್ನ ಸಹ ನಟ ವಿಜಯ್ ಅವರನ್ನು ನೋಡಿದೆ. ನನ್ನ ಜೀವನದ ಪ್ರಮುಖ ವ್ಯಕ್ತಿಗಳಲ್ಲಿ ಅವರು ಸಹ ಒಬ್ಬರು. ಅವರು ವಿಶಾಲ ಹೃದಯದವರು. ಒಂದು ಬಾರಿ ಸೆಟ್ಗೆ ಅವರು ಬಂದರೆ ಮತ್ತೆ ಸೆಟ್ನಿಂದ ಹೊರಹೋಗುತ್ತಿರಲಿಲ್ಲ. ನಾನೂ ಅವರಿಂದ ತುಂಬಾ ಕಲಿತಿದ್ದೇನೆ.. ನಾನು ಕೂಡ ಅದನ್ನು ಪಾಲಿಸುತ್ತೇನೆ. ಚಿತ್ರೀಕರಣದ ವೇಳೆ ನನ್ನ ಟ್ರೇಲರ್ಗೆ ನಾನು ಹೋಗುವುದು ಬಹಳ ಕಡಿಮೆ. ಇಲ್ಲದಿದ್ದರೆ ಬಹಳಷ್ಟು ಹೊತ್ತು ಕಾಯಬೇಕಾಗುತ್ತದೆ. ನಾನು ಸಾಮಾನ್ಯವಾಗಿ ಸೆಟ್ನಲ್ಲಿಯೇ ಸುತ್ತಾಡುತ್ತಿರುತ್ತೇನೆ. ನಾವು ಏಕೆ ಡಿಫರೆಂಟ್ ಶಾಟ್ಗಳನ್ನು ತೆಗೆದುಕೊಳ್ಳುತ್ತಿರುತ್ತೇವೆ ಎಂದು ತಿಳಿಯಲು ಹೆಚ್ಚಾಗಿ ಯೋಚಿಸುತ್ತಿರುತ್ತೇನೆ. ನಾನು ಸಿಬ್ಬಂದಿಯೊಂದಿಗೆ ಮಾತನಾಡಲು ಬಯಸುತ್ತೇನೆ. ನಾನು ಯಾವಾಗಲೂ ಎಲ್ಲರ ಮಧ್ಯೆ ಇರಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd