ಬೆಳಗಾವಿ: ಬಿಜೆಪಿ, ಆರೆಸ್ಸೆಸ್ (BJP, RSS) ಶಕ್ತಿ ಹೋರಾಟ ನಡೆಸುವ ಗಟ್ಟಿಗಿಟ್ಟಿ ಪ್ರಿಯಾಂಕಾ ಗಾಂಧಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಡಿ ಹೊಗಳಿದ್ದಾರೆ.
1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಶತಮಾನವಾದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಿಯಾಂಕಾ ಗಾಂಧಿ (Priyanka Gandhi ) ನೋಡಲು ಹಾಗೆ ಕಾಣಬಹುದು. ಆದರೆ, ಅವರು ಸಿಂಹಿಣಿ ಇದ್ದಂತೆ. ಮೋದಿ, ಅಮಿತ್ ಶಾ ಅವರ ಚಮಚಾಗಳು ಪ್ರಿಯಾಂಕಾಗೆ ಬೈತಾರೆ. ಹಾಗೆ ಮಾತನಾಡುವುದಕ್ಕಿಂತ ಮುಂಚೆಯೇ ನಾವು ಮಾಡಿರುವ ಕಾರ್ಯವನ್ನು ಅವರು ಮಾಡಿ ತೋರಿಸಲಿ ಎಂದು ಗುಡುಗಿದ್ದಾರೆ.
2004ರಲ್ಲಿ ಸೋನಿಯಾ ಗಾಂಧಿ ದೇಶದ ಪ್ರಧಾನಿಯಾಗಬೇಕಿತ್ತು. ಆದರೆ ಅವರು ಅಧಿಕಾರ ಸ್ವೀಕರಿಸಿದೇ ಮನಮೋಹನ್ ಸಿಂಗ್‌ಗೆ ತ್ಯಾಗ ಮಾಡಿದರು. ಸೋನಿಯಾ ಗಾಂಧಿ ಅವರ ಕೃಪೆಯಿಂದ ನಾನು ಎಐಸಿಸಿ ಅಧ್ಯಕ್ಷನಾಗಿದ್ದೇನೆ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ದೇಶಕ್ಕಾಗಿ ಬಹಳಷ್ಟು ತ್ಯಾಗ ಮಾಡಿದ್ದಾರೆ. ಆದರೂ ನಮ್ಮ ಯೋಜನೆ ಹಾಗೂ ಕಾರ್ಯಗಳನ್ನು ಬಿಜೆಪಿ ಟೀಕೆ ಮಾಡುತ್ತಿದೆ ಎದು ಗುಡುಗಿದ್ದಾರೆ.
ಮಹಾತ್ಮ ಗಾಂಧೀಜಿಗೆ ಗುಂಡು ಹಾರಿಸಿ ಕೊಂದದ್ದು ಯಾರು? ಆ ಗೋಡ್ಸೆ ಸಾರ್ವಕರ್ ಶಿಷ್ಯ. ಗಾಂಧಿ ಗುಜರಾತ್‌ನವರೇ ಆದರೂ ಮೋದಿಗೆ ಗೌರವ ಇಲ್ಲ. ಏಕೆಂದರೆ ಮೋದಿ ಪೂಜೆ ಮಾಡೋದು ಗಾಂಧಿಗೆ ಗುಂಡು ಹಾರಿಸಿದ ಗೋಡ್ಸೆಯನ್ನು ಎಂದು ಟೀಕಿಸಿದ್ದಾರೆ.