Priyanka kharge : ಕಾಮಧೇನುವಿಗೆ ಪರ್ಯಾಯ ಯಾವುದಿದೆ – ಪ್ರಿಯಾಂಕಾ ಖರ್ಗೆಗೆ ಬಿಜೆಪಿ ಪ್ರಶ್ನೆ
ಗೋಹತ್ಯೆ ನಿಷೇಧ ಹಲವರಿಗೆ ಮಾರಕ ಎಂಬ ಪ್ರಿಯಾಂಕಾ ಖರ್ಗೆ ಹೇಳಿಕೆಯನ್ನು ಬಿಜೆಪಿಯು ಕಟುವಾಗಿ ಟೀಕಿಸಿದೆ.
ಗೋಹತ್ಯೆ ನಿಷೇಧ ಕಾನೂನಿನಿಂದ ದೇಶಕ್ಕೆ 5,280 ಕೋಟಿ ಆರ್ಥಿಕ ಹೊರೆಯಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಈ ಮೊದಲು ಹೇಳಿಕೆ ನೀಡಿದ್ದರು. ರೈತರು, ಚರ್ಮ ಉದ್ಯಮ ಕಾರ್ಮಿಕರು ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಈ ಕಾಯಿದೆಯಿಂದ ದೊಡ್ಡ ಪೆಟ್ಟು ಬಿದ್ದಿದೆ ಎಂದು ಖರ್ಗೆ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಕಟುಕ ಕಾಂಗ್ರೆಸ್ ಎಂದು ಖಾರವಾಗಿ ಟೀಕಿಸಿದೆ. ಚರ್ಮ ಉದ್ಯೋಗಕ್ಕೆ ಪರ್ಯಾಯ ವ್ಯವಸ್ಥೆ ಇದೆ. ಆದರೆ ಕಾಮಧೇನುವಿಗೆ ಪರ್ಯಾಯ ಯಾವುದಿದೆ ಎಂದು ಪ್ರಿಯಾಂಕಾ ಖರ್ಗೆಯನ್ನು ಬಿಜೆಪಿ ಪಕ್ಷವು ಪ್ರಶ್ನಿಸಿದೆ.
ಅಲ್ಪಸಂಖ್ಯಾತರ ಮತಕ್ಕಾಗಿ ಗೋಹತ್ಯೆ ನಿಷೇಧ ವಿರೋಧ ಮಾಡುವ ಕಾಂಗ್ರೆಸ್ ನ ಕೀಳು ರಾಜಕೀಯಕ್ಕೆ ಧಿಕ್ಕಾರ ಎಂದಿರುವ ಬಿಜೆಪಿ, ಗೋಹತ್ಯೆ ನಿಷೇಧಿಸಬೇಕು ಎನ್ನುವುದನ್ನು ಮಹಾತ್ಮ ಗಾಂಧಿ ಪ್ರತಿಪಾದಿಸಿದ್ದರು. ಆದರೆ ಈ ಕಾಯಿದೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ. ಇದರಿಂದ ಕಾಂಗ್ರೆಸ್ ಗಾಂಧಿ ಚಿಂತನೆಯ ವಿರೋಧಿ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಬಿಜೆಪಿ ಹೇಳಿದೆ.
Priyanka Kharge: What is the alternative to Kamadhenu – BJP question to Priyanka Kharge