ಗುಜರಾತ್ ನ ಜಾಮ್ ನಗರದಲ್ಲಿ ಬೋರ್ ವೆಲ್ ಗೆ ಬಿದ್ದಿದ್ದ 2 ವರ್ಷದ ಮಗುವನ್ನು ರಕ್ಷಿಸಲಾಗಿದೆ.
ಜಾಮ್ ನಗರದ ಗೋವಾನಾ ಗ್ರಾಮದಲ್ಲಿ ಮಗುವೊಂದು ಬೋರ್ ವೆಲ್ ಗೆ ಬಿದ್ದಿತ್ತು. ಸತತ 9 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಲಾಗಿದೆ. ಸದ್ಯ ಮಗು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದೆ.
ಬೋರ್ ವೆಲ್ ಗೆ ಬಿದ್ದಿದ್ದ ರಾಜು ಹಾಗೂ ಆತನ ಪೋಷಕರು ಮಧ್ಯಪ್ರದೇಶ ನಿವಾಸಿಗಳು. ಇವರು ಕಳೆದ 15 ದಿನಗಳ ಹಿಂದೆ ಕೂಲಿ ಕಾರ್ಯದ ಹಿನ್ನೆಲೆಯಲ್ಲಿ ನಗರಕ್ಕೆ ಬಂದಿದ್ದರು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸೇವಾ ಇಲಾಖೆಯ ಎರಡು ತಂಡಗಳು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಿವೆ. ಆದರೆ, ಗುಜರಾತ್ ನ ದ್ವಾರಕಾದಲ್ಲಿ ಬೋರ್ವೆಲ್ಗೆ ಬಿದ್ದ ಮೂರು ವರ್ಷದ ಬಾಲಕಿಯನ್ನು ರಕ್ಷಿಸಿದ ಒಂದು ಗಂಟೆಯೊಳಗೆ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾಳೆ.