ನವದೆಹಲಿ: ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವುದನ್ನು ಖಂಡಿಸಿ ನ್ಯಾಯಲಯಗಳಲ್ಲಿ ಪ್ರತಿಭಟನೆಗೆ ಆಪ್ ಕಾನೂನು ಘಟಕ ಕರೆ ನೀಡಿತ್ತು. ಇದಕ್ಕೆ ನ್ಯಾಯಾಲಯ ಖಡಕ್ ಎಚ್ಚರಿಕೆ ನೀಡಿದೆ.
ನ್ಯಾಯಲಯ ಆವರಣದಲ್ಲಿ ಪ್ರತಿಭಟನೆ ನಡೆಸುವುದು ಗಂಡಾಂತರ ಆಹ್ವಾನಿಸಿದಂತೆ ಎಂದು ಎಚ್ಚರಿಕೆ ನೀಡಿದೆ. ರಾಷ್ಟ್ರ ರಾಜಧಾನಿಯ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಬುಧವಾರ ಪ್ರತಿಭಟನೆಗೆ ಆಪ್ ಕಾನೂನು ಘಟಕ ಕರೆ ನೀಡಿತ್ತು. ಹೀಗಾಗಿ ಇದನ್ನು ಹೈಕೋರ್ಟ್ ನಲ್ಲಿ ಪ್ರಸ್ತಾಪಿಸಲಾಯಿತು.
ಪ್ರತಿಭಟನೆ ಕುರಿತು ಚಿಂತಿಸಬೇಡಿ, ನ್ಯಾಯಾಲಯವನ್ನು ಯಾರು ತಡೆಹಿಡಿಯಲಾಗುವುದಿಲ್ಲ ಅಥವಾ ನಿಲ್ಲಿಸಲಾಗುವುದಿಲ್ಲ. ನ್ಯಾಯಾಲಯವನ್ನು ಸಂಪರ್ಕಿಸುವ ಜನರ ಮೂಲಭೂತ ಹಕ್ಕು ಕಸಿದುಕೊಳ್ಳಲು ಸಾಧ್ಯವಿಲ್ಲ. ಅದನ್ನು ಯಾರೇ ಮಾಡಿದರೂ ಗಂಡಾಂತರ ಆಹ್ವಾನಿಸಿದಂತೆ. ಅಗತ್ಯವಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಮಾ. 28ರಂದು ಬಂಧಿಸಿತ್ತು.