ಪವರ್ ಸ್ಟಾರ್ ಸಿನಿಮಾದಲ್ಲಿ ‘ಘತೋತ್ಕಜ’ – ಜೇಮ್ಸ್ ಸಿನಿಮಾದಲ್ಲಿ ಕೇತನ್..!

1 min read

ಪವರ್ ಸ್ಟಾರ್ ಸಿನಿಮಾದಲ್ಲಿ ‘ಘತೋತ್ಕಜ’ – ಜೇಮ್ಸ್ ಸಿನಿಮಾದಲ್ಲಿ ಕೇತನ್..!

ಪವರ್ ಸ್ಟಾರ್ ರಾಜ್ ಪುನೀತ್ ರಾಜ್ ಕುಮಾರ್  ಅಭಿನಯದ ಬಹುನಿರೀಕ್ಷೆಯ  ಜೇಮ್ಸ್ ಸಿನಿಮಾದ ಚಿತ್ರೀಕರಣ ಲಾಕ್ ಡೌನ್ ಮುಗಿದ ನಂತರ ಮತ್ತೆ ಪುನರಾರಂಭವಾಗಿದೆ..

ಈಗಾಗಲೇ ಜೇಮ್ಸ್ ಸಿನಿಮಾದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ.  ಚೇತನ್ ಕುಮಾರ್ ಆಕ್ಷನ್ ಕಟ್ ಹೇಳ್ತಿರುವ ಈ ಸಿನಿಮಾದ ಶೂಟಿಂಗ್  ಜುಲೈ 5ರಿಂದ ಪ್ರಾರಂಭವಾಗಿದೆ. ಈ ನಡುವೆ ಸಿನಿಮಾದ ಮತ್ತೊಂದು ಇಂಟರೆಸ್ಟಿಂಗ್ ಅಪ್ ಡೇಟ್ ಸಿಕ್ಕಿದೆ..

ಹೌದು ಈ ಸಿನಿಮಾಗೆ  ಘಟೋತ್ಕಜ ಖ್ಯಾತಿಯ ನಟ ಕೇತನ್ ಕರಾಂಡೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ಕೇತನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಕೇತನ್ ಜೇಮ್ಸ್ ತಂಡ ಸೇರಿಕೊಂಡಿದ್ದು, ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಈಗಾಗಲೇ ಕನ್ನಡದಲ್ಲಿ  ಭರ್ಜರಿ ಸಿನಿಮಾ ಮೂಲಕ ದರ್ಶನ ನೀಡಿರುವ ಕೇತನ್ ಗೆ ಜೇಮ್ಸ್ 2ನೇ ಸಿನಿಮಾ ಆಗಿದೆ.   ಹಿಂದಿ ಸಿನಿಮಾರಂಗದಲ್ಲಿ ಖ್ಯಾತಿಗಳಿಸಿರುವ ಕೇತನ್  ಮಹಾಭಾರತ ಧಾರಾವಾಹಿಯಲ್ಲಿ ಘಟೋತ್ಕಚ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.  ಈ ಪಾತ್ರ ದೊಡ್ಡ ಮಟ್ಟದಲ್ಲಿ ಪ್ರಸಿದ್ಧಿ ತಂದುಕೊಟ್ಟಿತ್ತು.

ಪತ್ರ ಮುಖಕ್ಕೆ ಎಸೆದ್ರು, ಸ್ಮಾರಕ ಮಾಡಿದ್ದು ಹೆಚ್ಡಿಕೆಯಲ್ಲ : ದೊಡ್ಡಣ್ಣ

ಚಿತ್ರದಲ್ಲಿ ಪುನೀತ್‌ ಗೆ ನಾಯಕಿಯಾಗಿ ಪ್ರಿಯಾ ಆನಂದ್ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಈಗಾಗಲೇ ಪ್ರಿಯಾ ಆನಂದ್ ಹಾಗೂ ಪುನೀತ್ ರಾಜ್ ಕುಮಾರ್ ಇಬ್ಬರೂ ಒಟ್ಟಾಗಿ ರಾಜಕುಮಾರ ಸಿನಿಮಾದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನಗೆದ್ದಿದ್ದಾರೆ.. ಇದೀಗ 2 ಬಾರಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.   ಚಿತ್ರದಲ್ಲಿ ತೆಲುಗು ನಟ ಶ್ರೀಕಾಂತ್ , ಆದಿತ್ಯ ಮೆನನ್, ಅನು ಪ್ರಭಾಕರ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

ಇದಾದ ನಂತರ ಪವನ್ ಕುಮಾರ್ ನಿರ್ದೇಶ ಹೊಂಬಾಳೆ ಫಿಲಮ್ಸ್ ನ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ದ್ವಿತ್ವ’ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ನಟಿಸಲಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್ ಸಹ ರಿಲೀಸ್ ಆಗಿದ್ದು, ಅಪ್ಪು ವಿಭಿನ್ನ ಗೆಟ್ ಅಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ..

ಅಮೆಜಾನ್ ಪ್ರೈಮ್ ನಲ್ಲಿ ಜುಲೈ 21ಕ್ಕೆ ರಿಲೀಸ್ ಆಗಲಿದೆ ಕನ್ನಡದ ‘ಇಕ್ಕಟ್’

ಅಂಬರೀಶ್ ಬಗ್ಗೆ ಮಾತನಾಡುವಾಗ ಪ್ರಜ್ಞೆಯಿರಲಿ : ಹೆಚ್‍ಡಿಕೆಗೆ ರಾಕ್ ಲೈನ್ ವಾರ್ನಿಂಗ್

ಜುಲೈ 11ಕ್ಕೆ ಹೊಸ ಸಿನಿಮಾ ಘೋಷಣೆ ಮಾಡಲಿದೆ ಹೊಂಬಾಳೆ ಫಿಲ್ಮ್ಸ್ : ಈ ಸಿನಿಮಾದ ನಾಯಕ ಯಾರು…? 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd