ಬಹಿರಂಗ ಚರ್ಚೆಗೆ ಬನ್ನಿ : ಸಿದ್ದರಾಮಯ್ಯಗೆ ದಕ್ಷಿಣ ಬಿಜೆಪಿ ಘಟಕದ ಅಧ್ಯಕ್ಷ ಎನ್. ಆರ್ ರಮೇಶ್ ಬಹಿರಂಗ ಸವಾಲ್
ಬೆಂಗಳೂರು : ಕೋವಿಡ್ 19 ಹೆಸರಲ್ಲಿ ರಾಜ್ಯ ಬಿಜೆಪಿ ಸರ್ಕಾರ 2 ಸಾವಿರ ಕೋಟಿಯ ಅವ್ಯವಹಾರ ನಡೆಸಿದೆ ಎಂದು ಆರೋಪಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಗಳೂರು ದಕ್ಷಿಣ ಬಿಜೆಪಿ ಘಟಕದ ಅಧ್ಯಕ್ಷ ಎನ್. ಆರ್ ರಮೇಶ್ ಅವರು, ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.
ಸಿದ್ದರಾಮಯ್ಯ ಅವರ ಅಧಿಕೃತ ಕಚೇರಿಗೆ ಪತ್ರ ಬರೆದಿರುವ ರಮೇಶ್ ಅವರು, ಸೋಂಕು ನಿಯಂತ್ರಣಕ್ಕೆ ಬಳಕೆ ಮಾಡಿರುವ ಹಣದ ಲೆಕ್ಕ ಕೊಡಲು ನಾವು ಸಿದ್ಧ. ಹಾಗೆಯೇ ನಿಮ್ಮ ಅವಧಿಯಲ್ಲಿ ನಡೆದಿದ್ದ 97 ಬೃಹತ್ ಹಗರಣಗಳ ಬಗ್ಗೆಯೂ ನೀವು ಲೆಕ್ಕ ಕೊಡಬೇಕಲ್ಲವೇ ಎಂದು ಪ್ರಶ್ನಿಸಿ, ಮಾಧ್ಯಮಗಳ ಸಮ್ಮುಖದಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.
ಇನ್ನು ಸಿದ್ದರಾಮಯ್ಯ ಅವರಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ ರಮೇಶ್ ಅವರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ 97 ಹಗರಣಗಳಿಗೆ ಸಂಬಂಧಿಸಿದಂತೆ 37 ಸಾವಿರ ಪುಟಗಳ ದಾಖಲೆಯನ್ನು ಲಗತ್ತಿಸಿದ್ದಾರೆ.








