ಭಾಷಣ ಬಿಟ್ಟು ಕೊರೊನಾಗೆ ಪರಿಹಾರ ಕೊಡಿ – ರಾಹುಲ್ ಗಾಂಧಿ
ನವದೆಹಲಿ : ಕೊರೋನಾ ಪರಿಸ್ಥಿತಿ ಕುರಿತು ಟೊಳ್ಳು ಭಾಷಣಗಳನ್ನ ಮಾಡುವುದನ್ನ ಬಿಟ್ಟು ದೇಶದ ಜನರಿಗೆ ಸರಿಯಾದ ಪರಿಹಾರವನ್ನು ನೀಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಎಂದಿನಂತೆಯೇ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿರುವ ರಾಹುಲ್ ಗಾಂಧಿ ಅವರು , ನನಗೂ ಸೋಂಕು ತಗಲಿದ್ದು, ಹೋಂ ಕ್ವಾರಂಟೈನ್ ನಲ್ಲಿದ್ದೇನೆ. ಬೇಸರ ತರಿಸುವ ಸುದ್ದಿಗಳು ಬರುತ್ತಲೇ ಇವೆ. ಭಾರತದಲ್ಲಿ ಇಂದು ಕೊರೋನಾದಿಂದ ಬಿಕ್ಕಟ್ಟು ಎದುರಾಗಿಲ್ಲ. ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳಿಂದಾಗಿ ಎದುರಾಗಿದೆ. ಕೇಂದ್ರ ಸರ್ಕಾರ ಟೊಳ್ಳು ಭಾಷಣ ಮಾಡುವ ಬದಲು ಕೊರೋನಾಗೆ ಪರಿಹಾರವನ್ನು ನೀಡಲಿ ಎಂದು ಕಿಡಿಕಾರಿದ್ದಾರೆ.