ಅರೆಸ್ಟ್ ಆದ ಯೂಟ್ಯೂಬರ್ ಭಾರ್ಗವ್ ನ ಕಾಮಪುರಾಣ ಬಿಚ್ಚಿಟ್ಟ ಪೊಲೀಸರು..!

1 min read

ಅರೆಸ್ಟ್ ಆದ ಯೂಟ್ಯೂಬರ್ ಭಾರ್ಗವ್ ನ ಕಾಮಪುರಾಣ ಬಿಚ್ಚಿಟ್ಟ ಪೊಲೀಸರು..!

ಮೊದಲಿಗೆ ಟಿಕ್ ಟಾಕ್ ನಲ್ಲಿ ಒಂದು ಹುಡುಗಿ ಜೊತೆ ಓಮೈ ಗಾಡ್ .. ಓ ಮೈ ಗಾಡ್ ಎನ್ನುನ್ನ ಫನ್ನಿ ಶಾರ್ಟ್ ವಿಡಿಯೋಗಳನ್ನ ಮಾಡಿಕೊಂಡು ಫೇಮಸ್ ಆಗಿ, ನಂತರ ಯೂಟ್ಯೂಬ್ ನಲ್ಲಿ ಸ್ವಂತ ಚಾನಲ್ ಓಪನ್ ಮಾಡಿ ವಿಡಿಯೋಗಳನ್ನ ಮಾಡುತ್ತಾ,  ಅಪಾರ ಫಾಲೋವರ್ಸ್ ಗಳನ್ನ ಸಂಪಾದಿಸಿದ್ದ ಯೂಟ್ಯೂಬರ್ ಭಾರ್ಗವ್ ಈಗ ಜೈಲಿನ ಅಥಿತಿಯಾಗಿದ್ದಾನೆ.

ಈತ ತೆಲುಗಿನ  ಹೆಚ್ಚು ಜನಪ್ರಿಯತೆ ಪಡೆದಿದ್ದ.  ಇತ್ತೀಚೆಗೆ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣವೊಂದರಲ್ಲಿ  ಚಿಪ್ಪಡ ಭಾರ್ಗವ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಈತ ಫನ್ ಬಕೆಟ್ ಎಂಬ ಯೂಟ್ಯೂಬ್ ಚಾನಲ್ ಹೊಂದಿದ್ದ. ಈತನ ಕಾಮಪುರಾಣದ ಕಂಪ್ಲೀಟ್ ಮಾಹಿತಿಯನ್ನ ಪೊಲೀಸರು ಮಾಧ್ಯಮದವರ ಮುಂದೆ ಬಿಚ್ಚಿಟ್ಟಿದ್ದಾರೆ.

ಕಿರು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದ 14 ವರ್ಷ ವಯಸ್ಸಿನ ಯುವತಿಗೆ ಮೊದಲಿಗೆ ಈತ ಮೆಸೆಜ್‌ ಮಾಡಿದ್ದ. ಬಳಿಕ ಆಕೆಯೊಂದಿಗೆ ಪರಿಚಯ ಬೆಳೆಸಿಕೊಂಡು, ತಾನು ಮಾಡುವ ವಿಡಿಯೋಗಳಲ್ಲಿ ನಟಿಸುವಂತೆ ಕೇಳಿದ್ದಾನೆ.

ಇದಕ್ಕೆ ಒಪ್ಪಿಕೊಂಡಿದ್ದ ಸಂತ್ರಸ್ತೆಯನ್ನು ಹೈದರಾಬಾದ್‌ ನ ತನ್ನ ಕೋಂಪಲ್ಲಿಯ ಮನೆಗೆ ಕರೆಸಿಕೊಂಡಿದ್ದಾನೆ. ಬಳಿಕ  ಆಕೆಯ  ಮೇಲೆ ಅತ್ಯಾಚಾರವೆಸಗಿದ್ದಾನೆ. ಜೊತೆಗೆ ಆಕೆಯ ನಗ್ನ ವಿಡಿಯೋವನ್ನು ಸಹ ಚಿತ್ರಿಸಿಕೊಂಡು, ಈ ಬಗ್ಗೆ ಹೊರಗೆ ಬಾಯಿಬಿಟ್ಟರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ.

ಇದೇ ರೀತಿ ಬ್ಲಾಕ್ ಮೇಲ್ ಮಾಡಿ ಪದೇ ಪದೇ ಆಕೆಯನ್ನ ಮನೆಗೆ ಕರೆಸಿಕೊಂಡು ಅತ್ಯಾಚಾರವೆಸಗಿದ್ದಾನೆ. ಇದಾದ ನಂತರ ಬಾಲಕಿಯು ಗರ್ಭಿಣಿಯಾಗಿರುವುದು ಅವರ ತಾಯಿಗೆ ಗೊತ್ತಾಗಿದೆ. ತಕ್ಷಣವೇ ಈ ಬಗ್ಗೆ ಮಗಳನ್ನ ವಿಚಾರಿಸಿದಾಗ ಆಕೆ ಸತ್ಯ ಬಾಯ್ಬಿಟ್ಟಿದ್ದಾಳೆ. ತಕ್ಷಣವೇ ಬಾಲಕಿಯ ತಾಯಿ ವಿಶಾಖಪಟ್ಟಣಂನ ಪೆಂಡುರ್ತಿ ಪೊಲೀಸ್ ಠಾಣೆಗೆ ತೆರಳಿ ಭಾರ್ಗವ್ ವಿರುದ್ಧ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಹೈದರಾಬಾದ್‌ ಗೆ ಆಗಮಿಸಿ ಭಾರ್ಗವ್‌ ಅನ್ನು ಬಂಧಿಸಿದ್ದಾರೆ. ಆರೋಪಿ ಚಿಪ್ಪಡ ಭಾರ್ಗವ್‌ ಮೇಲೆ ಪೋಕ್ಸೊ ಕಾಯ್ದೆಯ ಸೆಕ್ಷನ್‌ 376, 354 ರ ಅಡಿ ಪ್ರಕರಣ ದಾಖಲಿಸಲಾಗಿದೆ .

ಇನ್ನೂ  ಭಾರ್ಗವ್ ಅರೆಸ್ಟ್ ಆಗ್ತಿದ್ದಂತೆ ಆತನ ಜೊತೆಗೆ ಫನ್ನಿ ವಿಡಿಯೋಸ್ ನಲ್ಲಿ ಕಾಣಿಸಿಕೊಳ್ತಿದ್ದ ಓ ಮೈ ಗಾಡ.. ನಿತ್ಯ ಸಹ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ರು. ಆಕೆಗೂ ಏನಾದ್ರೂ ತೊಂದರೆ ಆಗಿದ್ಯಾ.. ಈ ಪ್ರಕರಣದ ಬಗ್ಗೆ ಆಕೆಗೆ ಏನಾದ್ರೂ ತಿಳಿದಿದ್ಯಾ ಹೀಗೆ ಅನೇಕರು ಚರ್ಚೆಗಳನ್ನ ಮಾಡಲಾರಂಭಿಸಿದ್ದರು.

ಆದ್ರೆ ಇದಕ್ಕೆ ನಿತ್ಯ ಇನ್ಸ್ಟ್ರಾಗ್ರಾಂ ಮೂಲಕ ಲೈವ್ ಗೆ ಬಂದು ನನಗೂ ಆ ಪ್ರಕರಣಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ. ನಾನು ಆತನನ್ನ ಭೇಟಿಯಾಗಿಯೇ 1 ವರ್ಷ ಕಳೆದಿದೆ. ಎಲ್ಲಾ ಸತ್ಯ ಇನ್ನೆರೆಡು ದಿನಗಳಲ್ಲಿ ಎಲ್ರ ಮುಂದೆ ಬರಲಿದೆ. ನಾನು ಮುಂಬೈ ನಲ್ಲಿ ಶೂಟಿಂಗ್ ನಲ್ಲಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು. ಅಲ್ಲದೇ ನಿತ್ಯ ಸಂತ್ರಸ್ತೆ ಎಂಬ ವದಂತಿಗಳಿಗೆ ಈ ಮೂಲಕ ತೆರೆ ಎಳೆದಿದ್ದರು. ಇನ್ನೊಂದೆಡೆ ಭಾರ್ಗವ್ ಬಂಧನದ ಬಗ್ಗೆ ಅನೇಕ ಯೂಟ್ಯೂಬರ್ ಗಳು ಸಹ ವಿಡಿಯೋ ಮಾಡಿ ಆತನಿಗೆ ಸರಿಯಾಗಿಯೇ ಆಗಿದೆ ಎಂದಿದ್ದಾರೆ.

ನಟಿಗೆ ಇದೆಂಥಾ ಶೋಕಿ ಬಂತು …. ಮಗನ ಮುಂದೆ ಬೆತ್ತಲಾಗಿ ಫೋಟೋ ಶೂಟ್ – ಜೈಲಿಗಟ್ಟಿದ ಕೋರ್ಟ್..!

ಸರ್ದಾರ್ ಕಾ ಗ್ರ್ಯಾಂಡ್ ಸನ್ – ನೀನಾ ಗುಪ್ತರ ಆಸೆ ಈಡೇರಿಸಲು ಲಾಹೋರ್ ಅನ್ನು ಅಮೃತಸರಕ್ಕೆ ಸ್ಥಳಾಂತರಿಸುವ ಅರ್ಜುನ್

ದುಬಾರಿ ಕಾರು ಖರೀದಿಸಿದ ಬಿಗ್ ಬಾಸ್ 6 ರ ವಿನ್ನರ್ ಶಶಿ..!

ಬಾಂಡಲಿಯಾದ ರಶ್ಮಿಕಾ… ಅಭಿಮಾನಿಗಳು ಶಾಕ್… ಏನಿದು ಕಿರಿಕ್ ರಾಣಿಯ ಹೊಸ ವರಸೆ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd