ಮೋದಿ ಸರ್ಕಾರ ಜನರ ಜೇಬು ಖಾಲಿ ಮಾಡಿ ಸ್ನೇಹಿತ ಜೇಬು ತುಂಬಿಸುತ್ತಿದೆ : ರಾಹುಲ್ ಗಾಂಧಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಜನರ ಜೇಬನ್ನು ಖಾಲಿ ಮಾಡಿ ತಮ್ಮ ಸ್ನೇಹಿತರ ಜೇಬು ತುಂಬಿಸುವ ದೊಡ್ಡ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ. ತೈಲ ಬೆಲೆಯಲ್ಲಿ ಬಿಜೆಪಿಯ ದರೋಡೆ ಎಂಬ ಹ್ಯಾಷ್ ಟ್ಯಾಗ್ ಮೂಲಕ ಟ್ವಿಟ್ ಮಾಡಿರುವ ರಾಹುಲ್‍ಗಾಂಧಿ, ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅಶ್ಲೀಲ ಚಿತ್ರ ತಯಾರಿಕೆಯ ಬೃಹತ್ ಜಾಲ ಪತ್ತೆ ಹಚ್ಚಿದ ಮುಂಬೈ ಪೊಲೀಸರು..!
ಮುಂಬೈ ಹೋಟೆಲ್‌ನಲ್ಲಿ ದಾದ್ರಾ, ನಗರ್ ಹವೇಲಿ ಸಂಸದ ಆತ್ಮಹತ್ಯೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿಲ್ಲ. ಬದಲಾಗಿ ಇಳಿಕೆಯಾಗುತ್ತಿದೆ ಎಂಬುದು ಜನರಿಗೆ ಗೊತ್ತಿದೆ. ಆದರೂ, ಬಂಕ್ ಗಳಲ್ಲಿ ಪೆಟ್ರೋಲ್ , ಡೀಸೆಲ್ ಹಾಕಿಸುವಾಗ ದರದ ಮೀಟರ್ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವುದನ್ನು ನೋಡಿದರೆ ಆತಂಕವಾಗುತ್ತಿದೆ. ಪೆಟ್ರೋಲ್ ಲೀಟರ್‍ಗೆ 100ರೂ. ದಾಟಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಮೋದಿ ಸರ್ಕಾರ ಜನರ ಜೇಬನ್ನು ಖಾಲಿ ಮಾಡುತ್ತಿದೆ. ಅವರ ಸ್ನೇಹಿತರಿಗೆ ಹಣ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಭಾರತದೊಂದಿಗಿನ ಸಂಘರ್ಷ ತಡೆಗೆ ಲಂಕಾ ಸಂಸತ್ತಿನಲ್ಲಿ ಇಮ್ರಾನ್ ಖಾನ್ ಭಾಷಣ ರದ್ದು..!
ಆನ್ ಲೈನ್ ಗೇಮಿಂಗ್ ಪ್ರಿಯರಿಗೆ ಗುಡ್ ನ್ಯೂಸ್ : ‘ಕಾಲ್ ಆಫ್ ಡ್ಯೂಟಿ’ ಲಾಂಚ್ ..!








