ಬೆಂಗಳೂರು : ‘ಗಾಂಧಿ’ ಹೆಸರನ್ನು ತೆಗೆದು ರಾಹುಲ್ ಪಂಚಾಯಿತಿ ಎಲೆಕ್ಷನ್ ಗೆದ್ದು ತೋರಿಸಲಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಸವಾಲ್ ಹಾಕಿದ್ದಾರೆ.
ಎಐಸಿಸಿ ಅಧ್ಯಕ್ಷ ನೇಮಕ ವಿಚಾರವಾಗಿ ಇಂದು ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯಿತು. ಸಭೆಯಲ್ಲಿ ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷರಾಗಲಿ ಎಂದು ಹಲವು ಕಾಂಗ್ರೆಸ್ ನಾಯಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಏತನ್ಮಧ್ಯೆ ಛತ್ತೀಸಗಢದ ಕಾಂಗ್ರೆಸ್ ಘಟಕ ತನ್ನ ಟ್ವೀಟ್ ನಲ್ಲಿ, ”ರಾಹುಲ್ ಗಾಂಧಿ ಕಂಡರೆ ಆರ್.ಎಸ್.ಎಸ್ ಗೆ ನಡುಕ” ಎಂದು ಟ್ವೀಟ್ ಮಾಡಿದ್ದು, ಇದಕ್ಕೆ ಸಚಿವ ಸಿ.ಟಿ ರವಿ ಟ್ವಿಟ್ಟರ್ ನಲ್ಲಿ ಪ್ರತ್ಯುತ್ತರ ನೀಡಿದ್ದಾರೆ.
ಸಿ.ಟಿ ರವಿ ಟ್ವೀಟ್ ನಲ್ಲಿ.. ”ರಾಹುಲ್ ಗಾಂಧಿ.. ‘ಗಾಂಧಿ’ ಹೆಸರನ್ನು ತೆಗೆದು ಮೊದಲು ತಮ್ಮ ಹೆಸರಿನ ಮೂಲಕವೇ ಪಂಚಾಯತಿ ಎಲೆಕ್ಷನ್ ಗೆದ್ದು ತೋರಿಸಲಿ” ಎಂದು ಸವಾಲು ಹಾಕಿದ್ದಾರೆ.








