Raichur | 20 ರೂಪಾಯಿಗಾಗಿ ಜಡೆಜಗಳ – ಮಹಿಳೆ ಸಾವಿನಲ್ಲಿ ಅಂತ್ಯ
ರಾಯಚೂರು : 20 ರೂಪಾಯಿ ನೋಟಿನ ವಿಚಾರವಾಗಿ ಶುರುವಾದ ಇಬ್ಬರ ಮಹಿಳೆಯರ ನಡುವಿನ ಜಗಳ ಮಹಿಳೆಯ ಸಾವಿನೊಂದಿಗೆ ಅಂತ್ಯವಾಗಿರುವ ಘಟನೆ ಸಿಂಧನೂರು ತಾಲೂಕಿನ ಗೀತಾ ಕ್ಯಾಂಪ್ ನಲ್ಲಿ ನಡೆದಿದೆ.
ರುಕ್ಕಮ ಮೃತ ಮಹಿಳೆಯಾಗಿದ್ದಾರೆ. ಗೀತಾ ಕ್ಯಾಂಪ್ ನ ರುಕ್ಕಮ್ಮ, ಮಲ್ಲಮ್ಮ ಎಂಬುವರು ಪರಸ್ಪರ ಜಗಳವಾಡಿದ್ದು, ಇದರಲ್ಲಿ ರುಕ್ಕಮ್ಮ ಗಂಭೀರವಾಗಿ ಗಾಯಗೊಂಡಿದ್ದರು.

ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಇತ್ತ ಗಾಯಗೊಂಡಿರುವ ಮಲ್ಲಮ್ಮಳಿಗೆ ಹೆಚ್ಚಿನ ಚಿಕಿತ್ಸೆ ಮುಂದುವರೆದಿದೆ.
ಈ ಘಟನೆ ಸಂಬಂಧ ಇಬ್ಬರ ಕಡೆಯಿಂದಲೂ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








