Raichur | ಹಳೆ ದ್ವೇಷ ಹಿನ್ನೆಲೆ – ವ್ಯಕ್ತಿಯ ಮೇಲೆ ಹಲ್ಲೆ
ರಾಯಚೂರು : ಹಳೆ ದ್ವೇಷ ಹಿನ್ನೆಲೆಯಲ್ಲಿ ಸಿನಿಮಾ ನೋಡಿ ವಾಪಸ್ ಆಗುತ್ತಿದ್ದ ಯುವಕನ ಮೇಲೆ ಗ್ಯಾಂಗ್ ಹಲ್ಲೆ ನಡೆಸಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಅಭಿಷೇಕ್ ಹಲ್ಲೆಗೆ ಒಳಗಾದ ಯುವಕನಾಗಿದ್ದು, ರಾಯಚೂರು ನಗರದ ರಿಲಯನ್ಸ್ ಮಾರ್ಟ್ ಬಳಿ ಘಟನೆ ನಡೆದಿದೆ.
ಆಗಸ್ಟ್ 26 ರ ರಾತ್ರಿ 11.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಹಲ್ಲೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚಿನ್ನ, ಪವನ್, ಸಂಕೆತ್, ರಘು ಹಾಗೂ ವೆಂಕಟೇಶ್ ಹಲ್ಲೆ ಆರೋಪಿಗಳಾಗಿದ್ದಾರೆ.
ಹಳೆ ದ್ವೇಷದ ಹಿನ್ನಲೆ ಅಭಿಷೇಕ್ ಮೇಲೆ ಚಿನ್ನ ಆಂಡ್ ಟೀಂ ನಿಂದ ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.