ಸಾವಿನಲ್ಲಿ ಅಂತ್ಯ ಕಂಡ ಪ್ರೇಮ ಪ್ರಕರಣ
ರಾಯಚೂರು: ಪ್ರೇಯಸಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪ್ರಿಯಕರ, ಶವವಾಗಿ ಪತ್ತೆಯಾಗಿರುವ ಘಟನೆ ಮಸ್ಕಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ
ಆರೋಪಿ ರಮೇಶ ಮೃತ ಪ್ರಿಯಕರ. ಈತನ ಶವ, ಪ್ರೇಯಸಿಯನ್ನು ಕೊಲೆ ಮಾಡಿರುವ ಸ್ಥಳದ ಸನೀಹದಲ್ಲೇ 33 ದಿನಗಳ ನಂತರ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದೆ. ಈ ಸಂಬಂಧ ಮಸ್ಕಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ರಮೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.
ನಡೆದಿದ್ದೇನು ? ರಮೇಶ ಮತ್ತು ಕೊಲೆಯಾದ ಪ್ರೇಯಸಿ ಭೂಮಿಕಾ ಇಬ್ಬರೂ ಸಂಬಂಧಿಕರು. ವರಸೆಯಲ್ಲಿ ಭೂಮಿಕಾ ಅತ್ತೆ ಮಗಳು. ಭೂಮಿಕಾ 9ನೇ ತರಗತಿ ವಿದ್ಯಾರ್ಥನಿ. ಇಬ್ಬರೂ ಪರಸ್ಪರ ಪ್ರೀತಿಸಿಸುತ್ತಿದ್ದು, ಜೊತೆಯಾಗಿ ಓಡಾಡಿಕೊಂಡಿದ್ದರು, ಬೇರೆ ಬೇರೆ ಕಡೆ ಸುತ್ತಾಡಿದ್ದಾರೆ.
ಆದರೆ ಈ ಸುಂದರ ಹಳ್ಳಿಹಕ್ಕಿಗಳಿಗೆ ವಿಲನ್ ಆದದ್ದು, ಭೂಮಿಕಾ ತವರು ಮನೆಯವರು. ಭೂಮಿಕಾ ಮನೆಯವರು ಈಕೆಯನ್ನು ರಮೇಶನೊಂದಿಗೆ ಮದುವೆ ಮಾಡಿಕೊಡುವುದಿಲ್ಲ ಎಂದು ಮದುವೆಗೆ ಒಪ್ಪಿರಲಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಫೆಬ್ರವರಿ 25 ರಂದು ತಪ್ಪು ನಿರ್ಧಾರ ತೆಗೆದುಕೊಂಡಿದ್ದ. ಅದು ರಮೇಶ ಭೂಮಿಕಾಳನನ್ನು ನಿರ್ಜನ ಸ್ಥಳವಾಗಿರುವ ಮಸ್ಕಿ ಪಟ್ಟಣದ ಹೊರವಲಯದಲ್ಲಿ ಸಾನಬಾಳ ಕ್ರಾಸ್ ಕರೆದುಕೊಂಡು ಹೋಗಿ ಕೊಲೆ ಮಾಡಿ, ಪರಾರಿಯಾಗಿದ್ದಾನೆ ಎಂದು ಆರೋಪ ಕೇಳಿ ಬಂದಿತ್ತು.
ಈ ಸಂಬಂಧ ಪೊಲೀಸರು ತನಿಕೆ ನಡೆಸುತ್ತಿರುವಾಗಲೇ, ಸೋಮವಾರ ತಾನು ಪ್ರೀತಿಸಿದ ಹುಡಗಿಯನ್ನು ಕೊಲೆ ಮಾಡಿದ ಸ್ವಲ್ಪ ದೂರದಲ್ಲಿರುವ ಪೊದೆಯಲ್ಲೇ ಈತನ ಮೃತ ದೇಹ ಸಹ ಪತ್ತೆಯಾಗಿದೆ. ಈ ಮೂಲಕ ಈ ಪ್ರೇಮ ಪ್ರಕರಣ ಸಾವಿನಲ್ಲಿ ಅಂತ್ಯಗೊಂಡಂತೆ ಆಗಿದೆ. ಸದ್ಯ ಮಸ್ಕಿ ಠಾಣೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.